ಫೇಸ್ಬುಕ್ ನಲ್ಲಿ ಪರಿಚಯವಾದ ಸ್ನೇಹ, ಠಾಣೆ ಮೆಟ್ಟಿಲೇರಿದ ಪ್ರಕರಣ!



ಸುದ್ದಿಲೈವ್/ತೀರ್ಥಹಳ್ಳಿ 

ಫೇಸ್ಬುಕ್ ನಲ್ಲಿ ಪರಿಚಯಯವಾದ ಸ್ನೇಹ, ಸಲುಗೆ ಪಡೆದು, ನಂತರ ವಾಟ್ಸಪ್ ನಲ್ಲಿ ಅಶ್ಲೀಲ ವಿಡಿಯೋ, ಫೋಟೋ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಪ್ರತಿ ದೂರು ದಾಖಲಾಗಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.

ಆಗುಂಬೆ ಸಮೀಪದ ಗ್ರಾಮವೊಂದರ ಪುರುಷ ಹಾಗೂ ಮಹಿಳೆ ಫೇಸ್ಬುಕ್ ನಲ್ಲಿ ಪರಿಚಯವಾಗಿ ನಂತರ ಚಾಟ್ ನಡೆಸಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋ ಕಾಲ್ ಸಹ ಮಾಡಿಕೊಂಡಿದ್ದಾರೆ. ಈ ವಿಚಾರ ಮಹಿಳೆಯ ಗಂಡನಿಗೆ ತಿಳಿದು ಆತನಿಗೆ ನಿನ್ನ ಅಶ್ಲೀಲ ವಿಡಿಯೋ ಇದ್ದು ಹಣ ನೀಡಲು ಕೇಳಿದ್ದಾನೆ. ಆಗ ಆ ಪುರುಷ ಆಗುಂಬೆ ಪೊಲೀಸ್ ಠಾಣೆಯಲ್ಲಿ ಬೆದರಿಕೆ ನೀಡುತ್ತಿರುವುದಾಗಿ ದೂರು ನೀಡಿದ್ದಾನೆ.

ಇತ್ತ ಮಹಿಳೆ ಹಾಗೂ ಮಹಿಳೆ ಗಂಡ ಫೇಸ್ಬುಕ್ ನಲ್ಲಿ ಪರಿಚಯವಾದ ಪುರುಷ ಅಶ್ಲೀಲ ಮೆಸೇಜ್ ಹಾಗೂ ಫೋಟೋ ವಿಡಿಯೋ ಮಾಡುತ್ತಿದ್ದು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೆ ಮಹಿಳೆಗೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದು ಮಹಿಳೆ ತಿರಸ್ಕರಿಸಿದ ಹಿನ್ನಲೆಯಲ್ಲಿ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಈ ವಿಚಾರವನ್ನು ಹನಿಟ್ರ್ಯಾಪ್ ಅನ್ನಬೇಕೋ ಇದರಲ್ಲಿ ಯಾರದ್ದು ತಪ್ಪೋ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close