ಸುದ್ದಿಲೈವ್/ಶಿವಮೊಗ್ಗ
ಹರ್ಷನ ಕೊಲೆಯ ವೇಳೆ ಪ್ರಜೋದನಾತ್ಮಕ ಭಾಷಣ ಮಾಡಿದ ಆರೋಪದ ಅಡಿ ಮಾಜಿ ಡಿಸಿಎಂ ಈಶ್ವರಪ್ಪ ಮತ್ತು ಈಗಿನ ಶಾಸಕ ಎಸ್ ಎನ್ ಚೆನ್ನಬಸಪ್ಪನವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ.
2022 ಫೆ.20 ರಂದು ಹರ್ಷನ ಕೊಲೆ ನಡೆದಾಗ ಪೊಲೀಸ್ ಇಲಾಖೆ ಪ್ರಾಥಮಿಕ ವರದಿಯನ್ನೇ ದಾಖಲಿಸುವ ಮುಂಚೆ ಮಾಜಿ ಡಿಸಿಎಂ ಮತ್ತು ಈಗಿನ ಹಾಲಿ ಶಾಸಕರು ಪ್ರಚೋದನಾತ್ಮಕ ಭಾಷಣ ಮಾಡಿದ್ದರು. ಒಂದು ಕೋಮಿನ ವಿರುದ್ಧ ಮತ್ತೊಂದು ಕೋಮನ್ನ ಎತ್ತಿಕಟ್ಟಿ ಮಾತನಾಡಿದ್ದರು. ಹಾಲಿ ಶಾಸಕರು ಪೊಲೀಸ್ ಇಲಾಖೆ ವೈಫಲ್ಯತೆ ಬಗ್ಗೆ ಮಾತನಾಡುವ ಭರದಲ್ಲಿ ಪೊಲೀಸರ ವೈಫಲ್ಯತೆಯಿಂದ ಹಿಂದೂಗಳನ್ನ ಕಳೆದುಕೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಮಾಜಿ ಡಿಸಿಎಂ ಈಶ್ವರಪ್ಪ ಶಿವಮೊಗ್ಗದಲ್ಲಿ ಮುಸ್ಲೀಂ ಗೂಂಡಗಳಿಂದ ಹರ್ಷನನ್ನಕಳೆದುಕೊಂಡಿದ್ದೇವೆ. ಅವರನ್ನ ಧಮನ ಮಾಡುತ್ತೇವೆ ಎಂಬ ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ಪೀಸ್ ಆರ್ಗನೈಜೇಷನ್ ನ ಕಾರ್ಯದರ್ಶಿ ರಿಯಾಜ್ ಅಹಮದ್ ಪಿಸಿಆರ್ ಮೂಲಕ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಸೆಷನ್ ಕೋರ್ಟ್ ಸಹ ದೊಡ್ಡಪೇಟೆ ಪೊಲೀಸರ 'ಬಿ' ರಿಪೋರ್ಟನ್ನ ಎತ್ತಿ ಹಿಡಿದಿತ್ತು. ಅದನ್ನ ಪ್ರಶ್ನಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮತ್ತೆ ರಿಯಾಜ್ ಅಹಮದ್ ಅರ್ಜಿ ಸಲ್ಲಿಸಿದ್ದರು. ಆದರೆ ವಿಷೇಷ ನ್ಯಾಯಾಲಯ ದೊಡ್ಡಪೆಟೆ ಪೊಲೀಸರ 'ಬಿ' ರಿಪೋರ್ಟನ್ನೇ ಎತ್ತಿ ಹಿಡಿದಿರುವುದರಿಂದ ಇಬ್ಬರಿಗೂ ಬಿಗ್ ರಿಲೀಫ್ ಸಿಕ್ಕಿದೆ