ಜೈಲಿನಲ್ಲಿ ನಿಷೇಧಿತ ವಸ್ತುಗಳು ಪತ್ತೆ

 


ಸುದ್ದಿಲೈವ್/ಶಿವಮೊಗ್ಗ

ಜೈಲ್ ಆವರಣದಲ್ಲಿ ನಿಷೇಧಿತ ವಸ್ತುಗಳ ವಿರುದ್ಧ ಈ ಒಂದು ವರ್ಷದಲ್ಲಿ ಹಲವು ಪ್ರಕರಣ ದಾಖಲಾಗಿದೆ. ಅದರಂತೆ ನಿನ್ನೆ ಮತ್ತೊಂದು ನಿಷೇಧಿತ ವಸ್ತುಗಳು ಪತ್ತೆಯಾಗಿ ಎಫ್ಐಆರ್ ದಾಖಲಾಗಿದೆ.

ಬೈಕ್ ನಲ್ಲಿ ಬಂದ ಇಬ್ವರು ಅಪರಿಚತರು ಜೈಲಿನ ಗೇಟಿನ ಬಳಿ ಕೆಎಸ್ ಐಎಸ್ ಎಫ್ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಸಂಶಾಯ ಸ್ಪದ ವಸ್ತುವೊಂದು ಕಪ್ಪುಬಣ್ಣದ ಇನ್ಶುಲೇಷನ್ ಟೇಪ್ ನಿಂದ ಸುತ್ತಿದ 2 ಪೊಟ್ಟಣಗಳು ಈ ವೇಳೆ ಕಂಡು ಬಂದಿದೆ.

ಏನದು ಎಂದು ಕೇಳಲು ಸಿಬ್ಬಂದಿ ಮುಂದಾದಾಗ ವಸ್ತುಗಳನ್ನ ಬಿಸಾಕಿ ಅಪರಿಚಿತರು ಪರಾರಿಯಾಗಿದ್ದಾರೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಾಹನದ ಕ್ರನಸಂಖ್ಯೆ ಕೆಎ 14ವಿ 0699 ಬಜಾಜ್ ಡಿಸ್ಕವರ್ ನಲ್ಲಿ ಅಪರಿಚಿತರು ಬಂದು ಈ ಕೃತ್ಯ ಎಸಗಿದ್ದಾರೆ.


ಇಲ್ಲಿಯವರೆಗೆ ಜೈಲಿನಲ್ಲಿ ನಿಷೇಧಿತ ವಸ್ತುಗಳು ಹಾಗೂ ಗಾಂಜಾ ಪ್ರಕರಣಗಳ ದಾಖಲು


ಅ.5 ರಂದು ಮೆಗ್ಗಾನ್ ನಲ್ಲಿ ಚಿಕಿತ್ಸೆಗಾಗಿ ಬಂದ ವಿಚಾರಣಾಧೀನ ಖೈದಿಯನ್ನ ಭೇಟಿಯಾದ ಕುಟುಂಬಸ್ಥರು ಗಾಂಜಾ ಪಾಸ್ ಮಾಡಿ ಗಾಂಜಾ ಪಾಸ್ ಮಾಡಿದನ್ನ ಗಮನಿಸಿದ ಡಿಎಆರ್‌ ಪೊಲೀಸ್ ಶೇಕ್ ಅಹಮದ್ ನ ವಿರುದ್ಧ ಪ್ರಕರಣ ದಾಖಲಿಸಿದ್ದರು. 


ಸೆಪ್ಟಂಬರ್ 19 ರಂದು ಜೈಲ್‌ನ ಸಜಾಬಂಧಿಯನ್ನ ನೋಡಲು ಬಂದವರೇ ಅನುಮಾನಸ್ಪದ ವಸ್ತುವನ್ನ ಪಾಸ್ ಮಾಡಲು ಯತ್ನಿಸಿ  ಅಂದರ್ ಆಗಿದ್ದರು. ಶಿಕ್ಷಾ ಬಂಧಿ ಶೋಯೇಬ್ @ ಚೂಡಿ ಬಿನ್ ಅಬ್ದುಲ್ ಗಫಾರ್ ಈತನನ್ನ ಭೇಟಿ‌ಮಾಡಲು ಬಂದ ಸೈಯ್ಯದ್ ಸಾದತ್ ಬಿನ್ ಮೆಹಬೂಬ್ ಪಾಷ, ತಾಹೀರ್ ಖಾನ್ ಬಂಧಿತರಾಗಿದ್ದರು. 


ಅದಕ್ಕೂ ಮೊದಲು ಸೆಪ್ಟಂಬರ್ 2 ರಂದು ಬೀಡಿಗಾಗಿ ಖೈದಿಗಳು ಪ್ರತಿಭಟಿಸಿದ್ದರು. ಆಗಸ್ಟ್ 28 ರಂದು ಎಸ್ಪಿ ಅವರ ನೇತೃತ್ವದಲ್ಲಿ ಜೈಲಿನಲ್ಲಿ ತಪಾಸಣೆ ನಡೆದಿತ್ತು. ಆಗಸ್ಟ್ 10 ರಂದು ಕೊಠಡಿ ಸಂಖ್ಯೆ 23 ರ ಬಳಿ ಎರಡು ನಿಷೇಧಿತವಸ್ತುಗಳುಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಹಸಿರು ಹುಲ್ಲು ಸುತ್ತಿದ ವಸ್ತುವೊಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ನಲ್ಲಿ ಪತ್ತೆಯಾಗಿದೆ. ಕೆಎಸ್ ಐ ಎಸ್ಎಫ್ ಸಿಬ್ಬಂದಿಯ ಸರ್ಪಗಾವಲು ಇದ್ದರೂ ಕಾರಾಗೃಹದಲ್ಲಿ ನುಸಳಿ ಬಂದು ಗಾಂಜಾ ಇಟ್ಟಿರುವ ಬಗ್ಗೆ ಜೈಲಿನ ಸೂಪರಿಂಟೆಂಡೆಂಟ್ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. 


ಜುಲೈ 25 ರಂದು ನಿಷೇಧಿತ ವಸ್ತುಗಳನ್ನ ಕಪ್ಪು, ಹಸಿರು, ನೀಲಿ ಬಣ್ಣದ ಗಮ್ ಪಟ್ಟಿಯನ್ನ ಸುತ್ತಿರುವ ಅನುಮಾನಸ್ಪದವಾದ ವಸ್ತುಗಳು ಜೈಲಿನ ಕುಮಧ್ವತಿ ವಿಭಾಗದ ಕೊಠಡಿ ಸಂಖ್ಯೆ 50 ರ ಹಿಂಭಾಗದಲ್ಲಿದಲ್ಲಿದ್ದು ಇದು ಸಿಸಿ ಟಿವಿಯನ್ನ ಪರಿಶೀಲಿಸುವಾಗ ಅಲ್ಲಿನ ಸಿಬ್ಬಂದಿಗೆ ಪತ್ತೆಯಾಗಿತ್ತು. 


ಗುದದಲ್ಲಿ ಪೇಸ್ಟ್ ನಲ್ಲಿ ಖೈದಿಗಳಿಗೆ ಗಾಂಜಾ ಸಾಗಿಸಿದ ಉದಾಹರಣೆ ಸಹ ನಡೆದಿದೆ. ಈಗ ಮತ್ತೊಂದು ಪ್ರಕರಣ ದಾಖಲಾಗಿದೆ. ಜೈಲಿನಲ್ಲಿ ಗಾಂಜಾ ಘಾಟು ಜೋರಾಗಿದೆ. ಕಣ್ಣಿಗೆ ತೋರುವಂತೆ ಗಾಂಜಾ ಕುರಿತಂತ ಪ್ರಕರಣಗಳು ಕಣ್ಣು ನೋಟಕ್ಕೆ ಕಂಡು ಬಂದಿದೆ. 

ಅದರಂತೆ ಓರ್ವ ಖೈದಿ ಮೊಬೈಲ್ ನುಂಗಿ ಹೊಟ್ಟೆ ನೋವು ಎಂದು ಒದ್ದಾಡಿ, ನಂತರ ಆಪರೇಷನ್ ಮೂಲಕ ಹೊರತೆಗೆದ ಪ್ರಕರಣ ಸಹ ಪತ್ತೆಯಾಗಿತ್ತು. ಹೀಗೆ ನಿಷೇಧಿತ ವಸ್ತು ಗಾಂಜಾ ಮತ್ತು ಮೊಬೈಲ್ ವಿರುದ್ಧ ದಾಖಲಾದ ದೂರುಗಳ ವಿವರಣೆ ಮಧ್ಯೆ ನಿನ್ನೆ ಮತ್ತೊಂದು ಪ್ರಕರಣ ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close