ವಕ್ಫ್ ವಿರುದ್ಧ ಬಿಜೆಪಿಯ ಭರ್ಜರಿ ಪ್ರತಿಭಟನೆ


ಸುದ್ದಿಲೈವ್/ಶಿವಮೊಗ್ಗ

ವಕ್ಫ್ ನಿಂದ ಉಂಟಾಗಿರುವ ಅವಾಂತರಗಳನ್ನ ಖಂಡಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಬಿಜೆಪಿ ಜಿಲ್ಲಾ ಘಟಕ ನಮ್ಮ ಹಕ್ಲು ನಮ್ಮ‌ಭೂಮಿ ಅಡಿಯಲ್ಲಿ ಸಾಧುಸಂತರ ಉಪಸ್ಥಿತಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. 

ರೈತರ ಪಾಲಿಗೆ ಮರಣ ಶಾಸನ ಬರೆಯುತ್ತಿರುವ ಕಾಂಗ್ರೆಸ್ ರೈತ ವಿರೋಧಿ ನೀತಿಗೆ ದಿಕ್ಕಾರ, ವಕ್ಫ್ ಅದಾಲತ್ ಹೆಸರಿನಲ್ಲಿ ರೈತರ ಬಾಯಿಗೆ ಮಣ್ಣು ಹಾಕುತ್ತಿರುವ ಜಮೀರ್ ಗೆ ದಿಕ್ಕಾರ, ಲ್ಯಾಂಡ್ ಜಿಹಾದ್ ಗೆ, ಸಿದ್ದರಾಮಯ್ಯ, ಜಮೀರ್ ಕುತಂತ್ರಕ್ಕೆ ದಿಕ್ಕಾರ ಎಂಬ ಪ್ಲಕಾರ್ಡ್ ಹಿಡಿದು ಪ್ರತಿಭಟನೆ ನಡೆಸಲಾಯಿತು.

ಬಿಳಕಿ ಶ್ರೀ ರಾಚೋಟೇಶ್ವರ ಶ್ರೀಗಳು, ಜಡೆಮಠದ ಶ್ರೀಗಳು, ವಿರಕ್ತ ಮಠದ ಶ್ರೀಗಳು, ಕೋಣಂದೂರು ಮಠ, ಶಿರಾಳಕೊಪ್ಪದ ವಿರಕ್ತ ಮಠ, ಜಲ್ಲಪ್ಪ ಮಠ, ಮಹಂತಸ್ವಾಮೀಜಿ ಜಂಗಮ ಮಠ, ತಿಪ್ಪಾಯಕೊಪ್ಪ, ನೀಲಕಂಠ ಸ್ವಾಮೀಜಿ ಚೌಕಿಮಠ ಹಾರನಹಳ್ಳಿ, ತೊರ್ಸಿಯ ಚೆನ್ನವೀರ ದೇಶೀಕೇಂದ್ರ ಮಠ, ಶಿಕಾರಿಪುರ ವಿಕಮರಕ್ತ ಪಮಠದ  ಚೆನ್ನಬಸವ ಸ್ವಾಮಿ ಗಳು, ಶಿರಾಳಕೊಪ್ಪದ ಸಿದ್ದೇಶ್ವರ ಶ್ರೀಗಳು

ಸಂಸದ ರಾಘವೇಂದ್ರ ಮಾತನಾಡಿ, ದೇಶದ ದೌರ್ಭಾಗ್ಯವಿದೆ. ಹೋರಾಟದ ಮೂಲಕವೇ ಸ್ವಾತಂತ್ರ ಪಡೆಯಲಾಗಿತ್ತು. ಅಂಬೇಡ್ಕರ್ ಸಂವಿಧಾನ ಇದ್ದರೂ  ಸ್ವಾತಂತ್ರ್ಯ ನಂತರವೂ ಹಕ್ಕಿಗಾಗಿ ಹೋರಾಡ ಬೇಕಿದೆ. ತುಷ್ಠೀಕರಣಕ್ಕಾಗಿ ತ್ರವರ್ಣ ಧ್ವಜದಲ್ಲಿರುವ ಬಿಳಿ ಮತ್ತು ಕೇಸರಿ ತೆಗೆದು ಹಸರೀಕರಣ ಮಾಡಲಾಗುತ್ತಿದೆ ಎಂದರು. 

ಜಗದಂಬಿಕಾ ಪಾಲ್ ನೇತೃತ್ವದ ಜೆಪಿಸಿಗೆ ಬರುವ ಕಾಂಗ್ರೆಸ್ ಬಂದು ಪ್ರತಿಭಟನೆ ಮಾಡುತ್ತಾರೆ. ಅನ್ವರ್ ಮಣಿಪ್ಪಾಡಿಯವರು ವಕ್ಫ್ ನಲ್ಲಿ ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂದು ಹೇಳಿದ್ದಾರೆ. ದೇಶ ವಿಭಜನೆ ಆದಾಗ ಬಿಟ್ಟು ಹೋದ ಮುಸ್ಲೀಂ ಭೂಮಿಯನ್ನ ವಕ್ಫ್ ಗೆ ಬಂದಿದೆ. ಇದು ಸರ್ಕಾರಕ್ಕೆ ಹೋಗಬೇಕಿತ್ತು. ಹೋಗದೆ ವಕ್ಫ್ ಗೆ ಹೋಗಿದೆ ಎಂದು ದೂರಿದರು.

ಮುಳುಗಡೆ ಸಂತ್ರಸ್ತರಿಗೆ ಭೂಮಿ‌ಕೊಡಲು ವರ್ಷಾನು ಗಟ್ಟಲೆ ಹೋರಾಟ ನಡೆಸಲಾಗುತ್ತಿದೆ. ಆದರೆ 7 ತಿಂಗಳ ಅವಧಿಯಲ್ಲಿ ವಕ್ಫ್ ಆಸ್ತಿಯನ್ನ ಕಬಳಿಸಲು ರಾತ್ರೋರಾತ್ರಿ ಹೊರಟಿದ್ದೀರಿ ಎಂದು ಗುಡುಗಿದರು. ಬಿಜೆಪಿ ನೇತೃತ್ವ ಎಲ್ಲಿಯ ವರೆಗೂ ಇರುತ್ತದೆಯೋ ಅಲ್ಲಿಯ ವರೆಗೆ ಹಿಂದೂಗಳ ರಕ್ಷಣೆಗೆ ಪಕ್ಷ ಬದ್ದವಾಗಿದೆ ಎಂದರು. 

ಚಳುಗಾಲದ ಸಂಸತ್ ಅಧಿವೇಶನದಲ್ಲಿ ಒಳ್ಳೆಯ ದಿನಗಳು ಬರುತ್ತಿದೆ. ಐತಿಹಾಸಿಕ ವಕ್ಫ್ ತಿದ್ದುಪಡಿಯಾಗಲಿದೆ ಎಂದು ಭರವಸೆ ನೀಡಿದರು. ಸಂಜೆ 5 ಗಂಟೆಯ ವರೆಗೆ ಪ್ರತಿಭಟನೆ ಮುಙದುವರೆಯಲಿದೆ. 

ಗಂಜಿಕೇಂದ್ರ ಆರಂಭಿಸಿ ಪ್ರತಿಭಟನೆ


ರೈತರ ಭೂಮಿ ಕಸಿದುಕೊಂಡು ರಾಜ್ಯ ಸರ್ಕಾರ ವಕ್ಫ್ ಗೆ ನೀಡುತ್ತಿರುವುದರಿಂದ ರೈತರು ಅತಂತ್ರರಾಗಿದ್ದು ಅವರಿಗೆ ಈ ಪ್ರತಿಭಟನೆಯಲ್ಲಿ ಗಂಜಿ ಕೇಂದ್ರವನ್ನ ಆರಂಭಿಸಲಾಗಿತ್ತು. ಅಣಕುಪ್ರದರ್ಶನವೂ ಪ್ರತಿಭಟನೆಯಲ್ಲಿ ನಡೆದಿದೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close