ಸುದ್ದಿಲೈವ್
ಮದ್ಯ ಮಾರಾಟಗಾರರ ಸಂಘವು ನಾಳೆ ಮದ್ಯ ಮಾರಾಟವನ್ನ ಸ್ಥಗಿತಗೊಳಿಸಿ ಬಂದ್ ಗೆ ಕರೆಕೊಟ್ಟಿದ್ದನ್ನ ವಾಪಾಸ್ ಪಡೆದಿದೆ. ಸಿಎಂ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಬಂದ್ ನ್ನ ಸಂಘ ವಾಪಾಸ್ ಪಡೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇದರಿಂದ ನಾಳೆ ಮದ್ಯ ಮಾರಾಟವು ಎಂದಿನಂತೆ ನಡೆಯಲಿದೆ. ಅಬಕಾರಿ ಸಚಿವರ ರಾಜೀನಾಮೆ, ಅಬಕಾರಿ ಇಲಾಖೆಯಲ್ಲಿ ಭ್ರಷ್ಠಾಚಾರವನ್ನ ಖಂಡಿಸಿ ಮದ್ಯ ಮಾರಾಟ ಸಂಘವು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿತ್ತು.
ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಭೆ ಯಶಸ್ವಿಯಾದ ಹಿನ್ನಲೆಯಲ್ಲಿ ಬಂದ್ ವಾಪಾಸ್ ಪಡೆಯಲಾಗಿದೆ.