ಸುದ್ದಿಲೈವ್/ಶಿವಮೊಗ್ಗ
ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಯ ವತಿಯಿಂದ ಶನಿವಾರ ನಗರದ ಐ.ಎಂ.ಎ ಸಭಾಂಗಣದಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು, ಇದೇ ಸಂದರ್ಭದಲ್ಲಿ ಐಎಂಎ ಶಾಖೆಯ ಅಮೃತ ಮಹೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಶಾಸಕರು ಹಾಗೂ ಸರ್ಜಿ ಆಸ್ಪತ್ರೆಗಳ ಸಮೂಹದ ಛೇರ್ಮನ್ ಡಾ.ಧನಂಜಯ ಸರ್ಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಹೆಸರಾಂತ ವಾಗ್ಮಿಗಳು ಹಾಗೂ ಉಪನ್ಯಾಸಕರಾದ ಜಿ.ಎಸ್. ನಟೇಶ್ ಅವರು ಡಿವಿಜಿಯವರ ಮಂಕುತಿಮ್ಮನ ಕಗ್ಗದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಡಾ.ಧನಂಜಯ ಸರ್ಜಿ, ವಾಗ್ಮಿ ಜಿ.ಎಸ್.ನಟೇಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಯ ಅಧ್ಯಕ್ಷರಾದ ಡಾ. ಶ್ರೀಧರ್, ಖಂಜಾಂಚಿಗಳಾದ ಡಾ.ರಾಜರಾಮ್, ಪ್ರಮುಖರಾದ ಡಾ.ಕೆ. ಆರ್ ಶ್ರೀಧರ್, ಡಾ. ಆರ್. ಬಿ ಪುರುಷೋತ್ತಮ, ಡಾ. ಚಿಕ್ಕಸ್ವಾಮಿ, ಡಾ. ಶ್ರೀನಿವಾಸ್, ಡಾ. ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.