ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪನವರ ವಿರುದ್ಧ ಸಾಮಾಜಿಕ ಜಾಲತಾಣವಾದ ಎಕ್ಸ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಅವಹೇಳನ ಮಾಡಿದ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನ.27 ರಂದು ಸಾಮಾಜಿಕ ಜಾಲತಾಣದ ನಿರ್ವಹಣೆಯಲ್ಲಿದ್ದ ವಿನೋಬ ನಗರ ಪೊಲೀಸ್ ರಿಗೆ ಎಕ್ಸ್ ಮತ್ತು ಇನ್ಸಾಗ್ರಾಮ್ ಎಂಬ ಸಾಮಾಜಿಕ ಜಾಲತಾಣದಲಿ ಮೋಹಿತ್ ನರಸಿಂಹ ಮೂರ್ತಿ ಎಂಬ ವ್ಯಕ್ತಿಯು ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ವಿರುದ್ಧ ಅವ್ಯಚ್ಯ ಶಬ್ದಗಳಿಂದ ನಿಂದಿಸಿ ಪೋಸ್ಟ್ ಮಾಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಮಧು ಬಂಗಾರಪ್ಪನವರಿಗೆ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಲು ಹಣವೇನು ನಿಮ್ಮಪ್ಪನ ಮನೆಯಿಂದ ತಂದಿದ್ದೀರಾ? ಸಾರ್ವಜನಿಕರ ಹಣ ಲೂಟಿ ಮಾಡಿ ನೀವು ಮತ್ತು ಕುಟುಂಬ ಐಶಾರಾಮಿ ಜೀವನ ನಡೆಸುತ್ತಿದ್ದೀರಾ ಎಂದು ಆರೋಪಿಸಿ ಅವ್ಯಚ್ಯ ಶಬ್ದಗಳನ್ನ ಬಳಸಿರುವುದು ತಿಳಿದುಬಂದಿದೆ.
ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರದ ಒಬ್ಬ ಗೌರವಾನ್ವಿತ ಸಚಿವರನ್ನು ಹಾಗು ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಉದ್ದೇಶಿಸಿ, ಏಕವಚನದಲ್ಲಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಸರ್ಕಾರದ ಘನತೆಗೆ ಧಕ್ಕೆ ತರುವಂತಹ, ಸರ್ಕಾರದ ಯೋಜನೆಯ ವಿರುದ್ಧವಾಗಿ ಸುಳ್ಳು, ಮಾಹಿತಿಯನ್ನು ಪ್ರಸಾರ ಮಾಡಿ, ಸಾರ್ವಜನಿಕರನ್ನು ಉದ್ರೇಕಿಸಿ, ಸರ್ಕಾರದ ವಿರುದ್ಧ ದಂಗೆ ಏಳಿಸುವ ಹಾಗೆ ಜನರನ್ನು ಪ್ರೇರೆಪಿಸುವ ಹಾಗೂ ಸಾರ್ವಜನಿಕರಲ್ಲಿ ಸರ್ಕಾರದ ಬಗ್ಗೆ ಅಸಹ್ಯ ಪಡುವ ರೀತಿಯಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲಿ ಹರಿಬಿಟ್ಟಿರುವುದು ಕಂಡು ಬಂದಿದ್ದು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.