ವಿಎ 'ಲೋಕಾ' ಬಲೆಗೆ


ಸುದ್ದಿಲೈವ್/ಶಿವಮೊಗ್ಗ

ಜಮೀನಿನ ಪೌತಿ ಖಾತೆ ಮಾಡಿಕೊಡಲು 25 ಸಾವಿರ ರೂ ಹಣ ಲಂಚ ಪಡೆಯುವ ವೇಳೆ ಗ್ರಾಮ ಲೆಕ್ಕಾಧಿಕಾರಿಯೊಬ್ಬರು (ವಿಎ) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 

ಹಾಯ್ ಹೊಳೆ ಅಂಚೆ ಅಗಸವಳ್ಳಿ ಹೊಸೂರಿನನಲ್ಲಿರುವ ಮುನಿರಂಗೇಗೌಡ.ಎನ್ @ ಕಿರಣ ರವರು ತಮ್ಮ ತಾತನಾದ ಮೃತ ರಂಗಪ್ಪ ಬಿನ್ ಲೇಟ್ ಕರಿಗುಡ್ಡೆಗೌಡ ರವರು ಮರಣ ಹೊಂದಿದ್ದರಿಂದ ಅವರ ಹೆಸರಿನಲ್ಲಿರುವ ಶಿವಮೊಗ್ಗ ತಾಲ್ಲೂಕು ಕಸಬಾ-1 ಹೋಬಳಿ, ಅಗಸವಳ್ಳಿ ಗ್ರಾಮದ ಅವರ 2 ಎಕರೆ ಜಮೀನನ್ನು ಅವರ ಅಜ್ಜಿ ಶ್ರೀಮತಿ ರಂಗಮ್ಮ ನವರ ಹೆಸರಿಗೆ ಪೌತಿ ಖಾತೆ ಮಾಡಿಕೊಡಲು ಶಿವಮೊಗ್ಗ ತಾಲ್ಲೂಕ್ ಕಛೇರಿಗೆ ಅರ್ಜಿ ಸಲ್ಲಿಸಿದ್ದರು.


ಶಿವಮೊಗ್ಗ ತಾಲ್ಲೂಕ್ ಕಸಬಾ-1 ರ ಗ್ರಾಮ ಆಡಳಿತ ಅಧಿಕಾರಿ (ವಿ.ಎ) ಶ್ರೀ ಸಂಜಯ್ ಮೋಹಿತೆ ಎಸ್.ಆರ್ ರವರನ್ನು ಇಂದು ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಗೆ ಹೋಗಿ ಭೇಟಿ ಮಾಡಿದಾಗ  ಗ್ರಾಮ ಆಡಳಿತಾಧಿಕಾರಿ  ಸಂಜಯ್ ಮೋಹಿತೆ ಎಸ್.ಆರ್ ರವರು ತಮ್ಮ ಬಳಿ ಪೌತಿ ಖಾತೆ ಮಾಡಿಕೊಡಲು 25,000/- ಲಂಚದ ಹಣಕ್ಕಾಗಿ ಭೇಡಿಕೆ ಇಟ್ಟಿದ್ದರು. 


ಬೇಡಿಕೆ ಇಟ್ಟ ಬಗ್ಗೆ  ಮೊಬೈಲ್‌ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿಕೊಂಡಿದ್ದ ಮುನಿರಂಗೇಗೌಡ ಇಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.


ನಂತರ ಇದೇ ದಿವಸ ಸುಮಾರು ಸಂಜೆ 5:15 ಗಂಟೆ ಸಮಯದಲ್ಲಿ ಗ್ರಾಮ ಆಡಳಿತಾಧಿಕಾರಿ ರ್ಪಿದುದಾರರಿಂದ ರೂ 25,000/- ಲಂಚದ ಹಣವನ್ನು ಶಿವಮೊಗ್ಗದ ಹಳೇ ಜೈಲು ಆವರಣದಲ್ಲಿರುವ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯಲ್ಲಿ ಸ್ವೀಕರಿಸುವ ವೇಳೆ ಲೋಕಾಯುಕ್ತ ದಾಳಿ ನಡೆದಿದೆ.  


ಸರ್ಕಾರಿ ನೌಕರನ ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಅಪಾದಿತ ಸರ್ಕಾರಿ ನೌಕರನನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟ‌ರ್ ಶ್ರೀ ವೀರಬಸಪ್ಪ ಎಲ್ ಕುಸಲಾಪುರ ನಡೆಸಲಿದ್ದಾರೆ. 


ಟ್ರ್ಯಾಪ್ ಕಾರ್ಯಾಚರಣೆಯನ್ನು ಲೋಕಾಯುಕ್ತ ಎಸ್ಪಿ ಮಂಜುನಾಥ ಚೌದರಿ ಎಂ.ಹೆಚ್. ನೇತೃತ್ವದಲ್ಲಿ ನಡೆದಿದೆ.   ಟ್ರ್ಯಾಪ್ ವೇಳೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಹೆಚ್.ಎಸ್ ಸುರೇಶ್, ಸಿಬ್ಬಂದಿಯವರಾದ ಶ್ರೀ ಯೋಗೇಶ್ ಸಿ.ಹೆಚ್.ಸಿ, ಶ್ರೀ ಟೀಕಪ್ಪ ಸಿ.ಹೆಚ್.ಸಿ. ಶ್ರೀ ಸುರೇಂದ್ರ ಸಿ.ಹೆಚ್.ಸಿ. ಶ್ರೀ ಪ್ರಶಾಂತ್ ಕುಮಾರ್, ಸಿ.ಪಿ.ಸಿ. ಶ್ರೀ ಚೆನ್ನೇಶ್, ಸಿ.ಪಿ.ಸಿ ಶ್ರೀ ಅರುಣ್ ಕುಮಾರ್ ಸಿ.ಪಿ.ಸಿ, ಶ್ರೀ ದೇವರಾಜ್, ಸಿ.ಪಿ.ಸಿ ಶ್ರೀಮತಿ ಪುಟ್ಟಮ್ಮ.ಎನ್. ಮ.ಪಿ.ಸಿ, ಶ್ರೀ ಗಂಗಾಧರ ಎ.ಪಿ.ಸಿ, ಶ್ರೀ ಪ್ರದೀಪ್, ಎ.ಪಿ.ಸಿ. ಶ್ರೀ ಜಯಂತ್ ಎ.ಪಿ.ಸಿ ಮತ್ತು ಶ್ರೀ ತರುಣ್ ಕುಮಾರ್ ಎ.ಪಿ.ಸಿ ರವರು ಹಾಜರಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close