ಅಂಗನವಾಡಿ ನೇಮಕಾತಿಗೆ ತಕರಾರು ಸಲ್ಲಿಸಲು ಅವಕಾಶ ಕೊಡುವಂತೆ ಮನವಿ


ಸುದ್ದಿಲೈವ್/ಶಿವಮೊಗ್ಗ

ಅಂಗನವಾಡಿ ಕಾರ್ಯಕರ್ತೆ/ಮಿನಿ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ತಾತ್ಕಾಲಿಕ ನೇಮಕಾತಿ ಪ್ರಕಟಿಸಿ ಅರ್ಹ ಅಭ್ಯರ್ಥಿಗಳಿಗೆ ತಕರಾರು ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡುವಂತೆ ಸೋಷಿಯಲ್ ಜಸ್ಟೀಸ್ ಫಾರ್ ಪಬ್ಲಿಕ್ ಪ್ರಾಬ್ಲೆಮ್ ಸಂಘಡನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. 

ದಿನಾಂಕ:30/07/2024 ರಂದು ಅಧಿಸೂಚನೆ ಸಂಖ್ಯೆ/ ಉನಿಶಿ/ಐಸಿಡಿ/AWWS/.2024-25 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಅದರ ಆಯ್ಕೆ ಪ್ರಕ್ರಿಯೆಯನ್ನು ನಡೆದು 15/20 ದಿನಗಳಾಗಿವೆ.

ಈ ಬಗ್ಗೆ ತಾತ್ಕಾಲಿಕ ಆಯ್ಕೆ ಪ್ರಕ್ರಿಯೆಯನ್ನ ಪ್ರಕಟಿಸದೆ ಇರುವುದರಿಂದ ಅರ್ಹ ಅಭ್ಯರ್ಥಿಗಳು ಆತಂಕಕ್ಕೆ  ಒಳಗಾಗಿರುವುದು ಕಂಡು ಬರುತ್ತಿದ್ದು ತಕ್ಷಣವೇ ತಾತ್ಕಾಲಿಕ ಆಯ್ಕೆ ಪ್ರಕ್ರಿಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ಕುಂದುಕೊರತೆ ಲೋಪ ದೋಷವಿದ್ದರೆ ತಕರಾರು ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ ಸೂಕ್ತ ಅವಕಾಶ ಕಲ್ಪಿಸಿ ಕೊಡುವ ಸಂಘಟನೆ ಅಧ್ಯಕ್ಷ ರಿಯಾಜ್ ಅಹಮದ್ ಕೋರಿಕೊಂಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close