"ಸೀತಾರಾಮ" ಬಂಜಾರ ಆಲ್ಬಮ್ ಸಾಂಗ್ ಬಿಡುಗಡೆ

ಸುದ್ದಿಲೈವ್/ಶಿವಮೊಗ್ಗ

ನಮ್ಮ ಶಿವಮೊಗ್ಗದ ಯುವ ಪ್ರತಿಭೆ, ಕನ್ನಡ ಚಿತ್ರರಂಗದ ಯುವ ನಿರ್ದೇಶಕ "ಹನು ನಿಗಮ್" ಅವರು ರಚಿಸಿ ಚಿತ್ರಗೀತೆ ಬರೆದು ನಿರ್ದೇಶಿಸಿರುವ ಬಂಜಾರ ಗೀತೆಯೊಂದು ದಿನಾಂಕ- 30/11/2024 ರ ಸಂಜೆ 5:30ಕ್ಕೆ ಸಿ ಕೆ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. 

ಹಳ್ಳಿಗಾಡಿನಲ್ಲಿ ನಡೆಯುವ ಒಂದು ಸುಂದರ ಪ್ರೇಮ ಕಾವ್ಯವನ್ನು ಹೊಂದಿರುವಂತಹ ಈ ಹಾಡು ಅತ್ಯದ್ಭುತವಾಗಿ ಮೂಡಿಬಂದಿದ್ದು,  ಶಶಿಕುಮಾರ್ ಹಾಗೂ ಕಲ್ಪನಾ ಪವಾರ್ ರವರು ನಾಯಕ ಮತ್ತು ನಾಯಕಿಯಾಗಿ ಅಭಿನಯಿಸಿದ್ದಾರೆ. ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟ ಮೈನಾ ಚಿತ್ರದ ಖ್ಯಾತಿಯ ನಟ ಚೇತನ್ ಅಹಿಂಸ ರವರು ಈ ಹಾಡಿನ ಪೋಸ್ಟರ್ ಅನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. 

ಈ ಹಾಡಿಗೆ ಸಂಗೀತವನ್ನು ಮನುರಾವ್ ರವರು ನೀಡಿದ್ದಾರೆ. ಹಾಗೂ ಕನ್ನಡ ಫಿಲಂ ಇಂಡಸ್ಟ್ರಿಯ ಖ್ಯಾತ ಗಾಯಕರಾದ ಚೇತನ್ ನಾಯ್ಕ ರವರು ಹಾಡಿದ್ದಾರೆ, ಸಾಹಿತ್ಯವನ್ನು ರವಿ ರಾಠೋಡ್ ಅವರು ಬರೆದಿದ್ದು, ಈ ಹಾಡಿನ ಸುಂದರವಾದ ಚಿತ್ರಣವನ್ನು ತಮ್ಮ ಕ್ಯಾಮರದ ಕೈಚಳಕದಲ್ಲಿ ಭರತ್ ರವರು ತೋರಿಸಿದ್ದಾರೆ,  ಈ ಹಾಡಿಗೆ ಬಂಡವಾಳವನ್ನು ಸಿ ಕೆ ಪ್ರೊಡಕ್ಷನ್ಸ್ ಮತ್ತು ಆರ್ ಎನ್ ಎಸ್ ಪ್ರೊಡಕ್ಷನ್ಸ್ ರವರು ಹಾಕಿದ್ದು, ಅವರ ಜೊತೆಗೆ ಮೀನಾಕ್ಷಿ ಬಾಯಿ, ನಾಗ ನಾಯ್ಕ್ ,ಮಂಜುನಾಥ್ ಜೆ  ನಾಯ್ಕ್ ಹಾಗೂ ಶಿವು ರಾಥೋಡ್ ಅವರು ಕೈಜೋಡಿಸಿದ್ದಾರೆ. 


ಈ ಹಾಡಿನ ಚಿತ್ರೀಕರಣವನ್ನು ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದಲ್ಲಿ ಚಿತ್ರಕರಿಸಿಲಾಗಿದ್ದು ಈ ಹಾಡು ತುಂಬಾ ಸುಂದರವಾಗಿ ಮೂಡಿಬಂದಿದೆ.. ಹಾಗೂ ಹನು ನಿಗಮ್ ರವರಿಂದ ಇನ್ನು ಹೆಚ್ಚು ಹೆಚ್ಚು ಇಂತಹ ಒಳ್ಳೆಯ ಹಾಡುಗಳು ಮೂಡಿ ಬರಲಿ ಎಂದು ಹಾರೈಸುವುದರ ಜೊತೆಗೆ, ಈ ಗೀತೆ ಯಶಸ್ವಿಯಾಗಲೆಂದು ಶುಭಹಾರೈಸೋಣ...

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close