ಇ-ಸ್ವತ್ತಿಗೆ ಉಪಾಯುಕ್ತರ ವಿರುದ್ಧ ಡಿಸಿಗೆ ಯುವ ಕಾಂಗ್ರೆಸ್ ಮನವಿ


ಸುದ್ದಿಲೈವ್/ಶಿವಮೊಗ್ಗ

ಇ-ಆಸ್ತಿ ನೀಡಲು ಸಾರ್ವಜನಿಕರನ್ನು ಅಲೆದಾಡಿಸಿ - ಹಣಕ್ಕೆ ಬೇಡಿಕೆ ಇಡುತ್ತಿರುವ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರ  ವಿರುದ್ಧ ಕ್ರಮಕ್ಕೆ ಆಗ್ರಿ ಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ರಾಜ್ಯದ ಎಲ್ಲ ನಗರ – ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ, ಇ-ಆಸ್ತಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಅದರಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು, ಅಕ್ಟೋಬರ್ 7 ರಿಂದ ಇ – ಆಸ್ತಿ ವ್ಯವಸ್ಥೆ ಅಳವಡಿಸಿಕೊಂಡಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ, ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜಿಸಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ, ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿ ನೊಂದಣಿಗೆ ಪಾಲಿಕೆಯ ಇ – ಆಸ್ತಿ ಹೊಂದಿರುವುದು ಕಡ್ಡಾಯವಾಗಿದೆ.

ಇದರಿಂದ ಸ್ಥಿರಾಸ್ತಿಗಳ ಮಾರಾಟ, ಖರೀದಿ ಪ್ರಕ್ರಿಯೆ , ಬ್ಯಾಂಕು, ಸೊಸೈಟಿಗಳಲ್ಲಿ ಸಾರ್ವಜನಿಕರು ವ್ಯವಹರಿಸುವುದು ಅಸ್ತವ್ಯಸ್ತವಾಗುವಂತಾಗಿದೆ. ಪಾಲಿಕೆ, ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ನಾಗರೀಕರು ನಿತ್ಯ ಅಲೆದಾಡುತ.   ಇ – ಆಸ್ತಿ ಮಾಡಿಸಲು ಮಹಾನಗರ ಪಾಲಿಕೆ ಕಂದಾಯ ವಿಭಾಗದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜನ ಸಾಗರವೇ ಕಂಡುಬರುತ್ತಿದೆ. ಆದರೆ ನೂತನ ವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಪಾಲಿಕೆಯ ಕಂದಾಯ ಅಧಿಕಾರಿಗಳು ನಾಗರೀಕರಿಗೆ ಸಮರ್ಪಕ ಮಾಹಿತಿಯನ್ನು ನೀಡದೆ  ಸಾರ್ವಜನಿಕರು ಇ ಆಸ್ತಿ ಮಾಡಿಸಲು ಅರ್ಜಿ ಸಲ್ಲಿಸಿದರೆ  ಎಲ್ಲ ದಾಖಲಾತಿಗಳು ಸರಿ ಇದ್ದರೂ ದಾಖಲಾತಿಗಳನ್ನು ಪರಿಶೀಲಿಸಲಾಗುವುದೆಂದು ನೆಪ ಹೇಳಿ  ಮಹಾನಗರ ಪಾಲಿಕೆಯ ಉಪ ಆಯುಕ್ತ (ಕಂದಾಯ ವಿಭಾಗದ) ಅಧಿಕಾರಿ ನೇರವಾಗಿ ಸಾರ್ವಜನಿಕರಿಗೆ ಹತ್ತರಿಂದ ಇಪ್ಪತ್ತು ಸಾವಿರದವರೆಗೆ ಹಣದ ಬೇಡಿಕೆ ಇಡುತ್ತಿದ್ದು.  ಸಾರ್ವಜನಿಕರು ಪಾಲಿಕೆ ಮತ್ತು ಜಿಲ್ಲಾಡಳಿತದ ವಿರುದ್ಧ ಇಡೀ ಶಾಪವನ್ನು ಹಾಕುತ್ತಿದ್ದಾರೆ

ಈ ಕುರಿತಂತೆ ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಮಹಾನಗರ ಪಾಲಿಕೆಗೆ ಭೇಟಿ ನೀಡಿ  ಸಂಬಂಧಪಟ್ಟ ಕಂದಾಯ ವಿಭಾಗದ ಅಧಿಕಾರಿಗಳ ಲಾಗಿನ್ ಗಳನ್ನು  ಪರಿಶೀಲಿಸಿ ತ್ವರಿತಗತಿಯಲ್ಲಿ ಇ – ಆಸ್ತಿ  ಸಾರ್ವಜನಿಕರಿಗೆ ನೀಡುವುದರೊಂದಿಗೆ  ನಾಗರಿಕರಿಗೆ ಹಣದ ಬೇಡಿಕೆ ಇಡುತ್ತಿರುವ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು  ಆಗ್ರಹಿಸುತ್ತೇವೆ

ಪ್ರಸ್ತುತ ಕಂದಾಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪ ಆಯುಕ್ತ ಕಂದಾಯ ವಿಭಾಗದ ಅಧಿಕಾರಿಯ ಮೂಲ ಹುದ್ದೆ ಕಂದಾಯ ವಿಭಾಗದ  ಕಚೇರಿ ಸಹಾಯಕರಾಗಿದು, ಕೆಲ ಪಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಉಪ ಆಯುಕ್ತ ಕಂದಾಯ ವಿಭಾಗದ ಉನ್ನತ ಹುದ್ದೆಗೆ ನಿಯೋಕ್ತಿಗೊಂಡಿ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ .ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ಪರಿಶೀಲಿಸಿ  ಇಂತಹ ಅಧಿಕಾರಿಯನ್ನು  ವಜಾಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ

ಮನವಿ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಕೆ ರಂಗನಾಥ್, ಸೂಡ ಸದಸ್ಯರು ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಪಿ ಗಿರೀಶ್ ನಗರಾಧ್ಯಕ್ಷ ಬಿ ಲೋಕೇಶ್, ಎಸ್ ಕುಮಾರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಮ್ ರಾಹುಲ್ ಪುಷ್ಪಕ್ ಕುಮಾರ್ ,ಮೋಹನ್ ಸೋಮಿನಕೊಪ್ಪ, ಎಮ್ ರಾಕೇಶ್,  ಕೆ ಎಲ್ ಪವನ್ ಗುರುಪ್ರಸಾದ್, ಆರ್ ಎಂ, ಓಂ , ನಾಗೇಶ್ , ನದೀಮ್, ಅಕ್ಷಯ್, ಸಚಿನ್, ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close