ಸುದ್ದಿಲೈವ್/ಶಿವಮೊಗ್ಗ
ಕತ್ತಲ ಸಿನಿಮಾ, ಅನ್ಯಾಯದ ವಿರುದ್ಧ ಹೋರಾಡಬೇಕಿದ್ದ ಪೊಲೀಸ್ ಇಲಾಖೆ ವ್ಯವಸ್ಥೆಯಲ್ಲೇ ಕಂಡು ಬಂದ ಲೋಪಗಳು ಪೊಲೀಸ್ ಅಧಿಕಾರಿಯೊಬ್ಬನನ್ನ ಬಘೀರನನ್ನಾಗಿ ಮಾಡುತ್ತೆ. ಇದೇ ಸಿನಿಮಾದ ತಿರುಳು.
ಅನ್ಯಾಯದ ವಿರುದ್ಧ ಹೋರಾಡುವ ಚಿತ್ರದ ನಾಯಕ ಶ್ರೀ ಮುರುಳಿ ಅಭಿನಯದ ಚಲನ ಚಿತ್ರ ಬಘೀರ, ಮದಗಜ ಸಿನಿಮಾ ನಂತರ ಅ.31 ರಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಶಿವಮೊಗ್ಗದ ಮಾಲ್ ಮತ್ತು ಮಲ್ಲಿಕಾರ್ಜುನ ಚಲನ ಚಿತ್ರ ಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
2021 ರಲ್ಲಿ ಬಿಡುಗಡೆಗೊಂಡ ಶ್ರೀ ಮುರುಳಿಯವರ ಅಭಿನಯದ 'ಮದಗಜ' ಬಳಿಕ ಮತ್ತೊಂದು ಸಿನಿಮಾ ರಿಲೀಸ್ ಆಗಿರಲಿಲ್ಲ. ಜಾಗರೂಕತೆಯಿಂದ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿರುವ ರೋರಿಂಗ್ ಸ್ಟಾರ್ 'ಬಘೀರ' ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಒಂದಿಷ್ಟು ಸಮಯವನ್ನೇ ತೆಗೆದುಕೊಂಡಿದ್ದಾರೆ. ಪ್ರಶಾಂತ್ ನೀಲ್ ಕಥೆ ಬರೆದಿದ್ದು, ಸಿನಿಮಾ ಪ್ರೇಕ್ಷಕನನ್ನ 2 ಗಂಟೆ 13 ನಿಮಿಷಗಳ ವರೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಶಿವಮೊಗ್ಗದಲ್ಲಿ ಮಲ್ಲಿಕಾರ್ಜುನ ಚಲನಚಿತ್ರದಲ್ಲಿ ಬಿಡುಗಡೆಗೊಂಡ ಮೊದಲನೆಯ ದಿನ ಚಲನ ಚಿತ್ರ ಮಂದಿರ ಖಾಲಿನೇ ಇತ್ತು. ಎರಡನೇ ದಿನದಿಂದ ಪಿಕ್ ಅಫ್ ಆದ ಸಿನಿಮಾ ಈಗ ನಾಲ್ಕು ಶೋಗಳು ಜನಭರಿತವಾಗುತ್ತಿದೆ. ಅಂದರೆ ಜನ ಸಿನಿಮಾ ಚೆನ್ನಾಗಿದೆ ಎಂದು ಚಲನಚಿತ್ರ ಮಂದಿರದ ಕಡೆ ಮುಖಮಾಡಿದ್ದಾರೆ.
ಸಿನಿಮಾ ಈ ಹಿಂದೆ ಫ್ಯಾಂಟಂ, ಸ್ಪೈಡರ್ ಮ್ಯಾನ್ ಗಳ ಸಿನಿಮಾ ಬಂದಂತೆ ಬಘೀರ ಕನ್ನಡದಲ್ಲಿ ಮೂಡಿ ಬಂದಿದೆ. ಯಾವಾಗ ಠಾಣೆಯ ಮುಂದೆ ಸಂತ್ರಸ್ತೆ ಯುವತಿ ಪೆಟ್ರೋಲ್ ಸುರಿದುಕೊಂಡು ಸಾವನ್ನಪ್ಪುತ್ತಾಳೆ ಅಲ್ಲಿಂದ ಸಿನಿಮಾ ನಾಯಕನ ಮನಸ್ಸು ಬದಲಾಗುತ್ತದೆ. ತಾಯಿ ಹೇಳುವಂತೆ ಅನ್ಯಾಯವನ್ನ ಸರಿಪಡಿಸಲು ಪೊಲೀಸೇ ಆಗಬೇಕೆಂದಿಲ್ಲ ಎಂಬ ಸತ್ಯ ತಿಳಿಯುವ ನಾಯಕ ಬಘೀರನ ರೂಪದಲ್ಲಿ ಅನ್ಯಾಯಕ್ಕೆ ನ್ಯಾಯ ಒದಗಿಸುತ್ತಾನೆ.
ಎರಡನೇ ಅರ್ಧದಲ್ಲಿ ಬಘೀರನನ್ನ ಪತ್ತೆ ಹಚ್ಚುವುದೇ ಸಿನಿಮಾ ಆದರೆ ಮತ್ತೊಂದೆಡೆಗೆ ಅಟ್ಟಹಾಸ ಮೆರೆಯುವ ಅನ್ಯಾಯದ ವಿರುದ್ಧವೂ ಬಘೀರ ಹೋರಾಡುತ್ತಾನೆ. ಸಿನಿಮಾದ ನೆಗೆಟಿವ್ ಅಂಶವೆಂದರೆ ಸಿನಿಮಾದ ಬಹುತೇಕ ಶೂಟಿಂಗ್ ಕತ್ತಲಲಲ್ಲಿ ಮೂಡಿ ಬಂದಿದೆ. ಪ್ರಶಾಂತ್ ನೀಲ್ ಗೂ ಕತ್ತಲಿಗೂ ನಂಟಿದೆ ಎಂಬ ಸತ್ಯ ಮತ್ತೊಮ್ಮೆ ಸಾಭೀತಾಗಿದೆ.
ಎರಡನೇ ಅರ್ಧದಲ್ಲಿ ಬಘೀರನ ಬಗ್ಗೆ ಇದ್ದಕುತೂಹಲ ಕಡಿಮೆಗೊಳಿಸುತ್ತದೆ. ಬಘೀರ ಎಂದರೆ ಕರಿ ಚಿರತೆ. ಜಂಗಲ್ ಬುಕ್ ನ ಮೋಗ್ಲಿ ಕಥೆಯಲ್ಲಿ ಬಘೀರ ಬರ್ತಾನೆ. ನಾಯಕ ನಟನಾಗಿ ಗರುಡ ರಾಮ್, ಪ್ರಮೋದ್ ಶೆಟ್ಟಿ, ಪಾತ್ರಕ್ಕೆ ಜೀವತುಂಬಿದ್ದಾರೆ. ಅಧಿಕಾರಿಯಾಗಿ ಪ್ರಕಾಶ್ ರಾಜ್, ಪೋಷಕ ಪಾತ್ರದಲ್ಲಿ ಅಚ್ಯುತ್ ರಾವ್, ಸುಧಾರಾಣಿ ಉತ್ತಮವಾಗಿ ನಟಿಸಿದ್ದಾರೆ.
ರುಕ್ಮಿಣಿ ವಸಂತ್ ನಾಯಕ ನಟಿಯಾಗಿದ್ದಾರೆ. ಡಾ.ಸೂರಿ ನಿರ್ದೇಶಕ/ಚಿತ್ರಕಥೆ ಉತ್ತಮವಾಗಿ ಮೂಡಿಬಂದಿದೆ. ಮೂರನೇ ದಿನಕ್ಕೆ ನಾಲ್ಕನೇ ದಿನಕ್ಕೆ 10 ಕೋಟಿ ಸಂಭವಿಸಿದೆ ಎಂಬ ಮಾಹಿತಿ ಮಾಧ್ಯಮಗಳಿಂದ ತಿಳಿದು ಬಂದಿದೆ. ತೆಲುಗಿನಲ್ಲೂ ಉತ್ತಮ ಕಲೆಕ್ಷನ್ ಕಂಡು ಬಂದಿದೆ.