ಸುದ್ದಿಲೈವ್/ಶಿವಮೊಗ್ಗ
ಭೈರತಿ ರಣಗಲ್ ಸಿನಿಮಾ ಫ್ರೀಕ್ವೆಲ್ ಸಿನಿಮಾವಾಗಿದ್ದು ಜನ ಮೆಚ್ಚಿಕೊಂಡಿದ್ದಾರೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.
ಮಲ್ಲಿಕಾರ್ಜುನ ಸಿನಿಮಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ರಣಗಲ್ ಪಾತ್ರವೇ ವಿಶೇಷವಾದ ಪಾತ್ರವಾಗಿದ್ದು ಜನ ಮೆಚ್ಚಿಕೊಂಡಿದ್ದಾರೆ. ನ.29 ರಿಂದ ತಮಿಳು ಮತ್ತು ತೆಲಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ ಎಂದರು.
ನಿಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕವಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಟ ಶಿವರಾಜ್ ಕುಮಾರ್, ನ. 29ರ ನಂತರ ಅಮೇರಿಕಾದ ಮಿಯಾಮಿಗೆ ಒಂದು ತಿಂಗಳು ಚಿಕಿತ್ಸೆಗಾಗಿ ಹೋಗುತ್ತಿರುವೆ ಮುಂದಿನ ತಿಂಗಳು. ಆಪರೇಷನ್ ಇದೆ. ಆತಂಕ ಪಡುವ ವಿಷಯವೇನಿಲ್ಲ ಚೆನ್ನಾಗಿದ್ದೀನಿ ಎಂದರು.
ಸಿನಿಮಾಸ ರೆಸ್ಪಾನ್ಸ ಚೆನ್ನಾಗಿದೆ. ಚಲಚಿತ್ರವನ್ನ ಚಲನಚಿತ್ರ ಮಂದಿರಕ್ಕೆ ಬಂದು ನೋಡಲ್ಲ ಎಂಬ ಭಾವನೆಯನ್ನ ರಣಗಲ್ ತೆಗೆದು ಹಾಕಿದೆ. ಬಂಡವಾಳಕ್ಕೆ ಮೋಸವಾಗಿಲ್ಲ. ಕಲೆಕ್ಷನ್ ಚೆನ್ನಾಗಿದೆ. ಮುಂದಿನ ಪ್ರವಾಸ ಸಿದ್ದಾಪುರ, ರಾಣೇಬೆನ್ನೂರು ಮತ್ತು ಹುಬ್ವಳ್ಳಿ ಕಡೆ ಪ್ರಚಾರಕ್ಕಾಗಿ ಹೋಗುತ್ತಿರುವುದಾಗಿ ಹೇಳಿದರು. ಈಸೂರು ದಂಗೆ ಸಿನಿಮಾ ತಯಾರಾಗುತ್ತಿದೆ. ಬರ್ತಾ ಇದೆ ಚರ್ಚೆ ಆದಮೇಲೆ ಸಿನಿಮಾ ಆಗಲಿದೆ. ಇದುಸಹ ನಮ್ಮ ಪ್ರೊಡಕ್ಷನ್ ನಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದರು.