ಮಾಜಿ ಶಾಸಕರ ಕಾರಿನಿಂದ ಸಂಭವಿಸಿದ ರಸ್ತೆ ಅಪಘಾತ?


ಸುದ್ದಿಲೈವ್/ಶಿವಮೊಗ್ಗ

ಮಾಜಿ ಶಾಸಕರೊಬ್ಬರ ಕಾರೊಂದು ರಸ್ತೆ ಅಘಾತ ಪಡಿಸಿದ್ದು, ಇಂದು ಬೆಳಿಗ್ಗೆ ಖುದ್ದು ಮಾಜಿ ಶಾಸಕರೆ ಕಾರು ಚಲಾಯಿಸುವ ವೇಳೆ ಮಿಷಿನ್ ಕಾಂಪೌಂಡ್ ನ ಖಾಸಗಿ ಶಾಲೆಯ ಬಳಿ ಈ ಅಪಘಾತ ಸಂಭವಿಸಿದೆ.

ಯಾವುದೋ ಸಣ್ಣಪುಟ್ಟ ಅಪಘಾತವಾಗಿದ್ದರೆ ನಾವು ಸಹ ಸುದ್ದಿಮಾಡಲು ಹೋಗ್ತಾ ಇರಲಿಲ್ಲ. ಅಪಘಾತ ಪಡಿಸಿದವರಿಗೆ ಹಾಗೂ ಅವರ ಸಹಚರರಿಗೆ ಈಗಲೂ ಈ ಅಪಘಾತ ಸುದ್ದಿ ಮಾಡುವಂತದ್ದಲ್ಲ ಎಂದೇ ಅವರ ವಾದವಾಗಿರುತ್ತದೆ. 

ಆದರೆ ಅಪಘಾತದಲ್ಲಿ ಕಾಂಪೌಂಡ್ ಉರುಳಿಬಿದ್ದಿದೆ. ಮಾಹಿತಿಯ ಪ್ರಕಾರ ದ್ವಿಚಕ್ರ ವಾಹನ ಸವರರನ್ನ ತಪ್ಪಿಸಲು ಹೋಗಿ ಗೋಡೆಗೆ ಕಾರು ಗುದ್ದಿದೆ. ದ್ವಿಚಕ್ರವಾಹನ ಸವಾರರೊಬ್ಬರ ಕಾಲು ಸಹ ಮುರಿದಿದೆ ಎನ್ನಲಾಗಿದೆ. ಕಾರಿನ ಹೆಡ್ ಲೈಟ್ ಮತ್ತು ಮಿರರ್ ಹಾನಿಗೊಳಗಾಗಿದೆ. ಇದನ್ನ ಮುಚ್ಚಿ ಹಾಕುವ ಯತ್ನ ಸಹ ನಡೆಯುತ್ತಿದೆಯಾ ಎಂಬ ಅನುಮಾನಕ್ಕೂ ಅಪಘಾತ ಎಡೆಮಾಡಿಕೊಟ್ಟಿದೆ. 

ಕಾರಣ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿಲ್ಲ. ಪೊಲೀಸರಿಗೆ ಇಷ್ಟು ದೊಡ್ಡ ಅಪಘಾತ ಸಂಭವಿಸಿದರೂ ಅವರ ಕಾನೂನು ಠಾಣೆ ಬಿಟ್ಟು ಹೊರಗೆ ಬಂದು ನೊಂದವರಿಗೆ ನ್ಯಾಯಕೊಡಿಸುವಲ್ಲಿ ವಿಫಲವಾಗಿದೆ ಅಂತನೇ ಹೇಳಬಹುದು. ದಂಡ ವಸೂಲಿಯ ಗುಂಗಿನಲ್ಲೇ ಇಲಾಖೆ ಮುಳುಗಿರುವುದರಿಂದ ಈ ಅಪಘಾತ ಗಮನಕ್ಕೆ ಬಂದ ಹಾಗೆ ಇಲ್ಲ ಅನಿಸುತ್ತೆ

ಮೊನ್ನೆ ಸವಿ ಬೇಕರಿಯ ಬಳಿ ಸಂಭವಿಸಿದ ಅಪಘಾತದಲ್ಲಿಯೂ ತಾಯಿ ಸ್ಥಿತಿ ಗಂಭೀರವಾಗಿದೆ. ಈ ಪ್ರಕರಣವೂ ದೂರಾಗಿ ದಾಖಲಾಗುವಲ್ಲಿ ವಿಳಂಭವಾಗಿತ್ತು. ಅಪಘಾತಗಳು ಸಂಭವಿಸುವುದು ಸಾಮಾನ್ಯ. ಯಾರೂ ಅಪಘಾತ ಪಡಿಸಬೇಕೆಂದು ಬಯಸುವುದಿಲ್ಲ. ಆದರೆ ಅಚಾನಕ್ಕಾಗಿ ಸಂಭವಿಸಿದಾಗ ನಾವೇ ಕಾನೂನಿನ ಆಶ್ರಯ ಪಡೆಯುವುದು ಸಹ ಪ್ರಾಮಾಣಿಕತೆಯ ಮತ್ತೊಂದು ಮುಖವಾಗುತ್ತದೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close