ಸಚಿವ ಜಮೀರ್ ನ್ನ ಸಚಿವ ಸಂಪುಟದಿಂದ ಕೈಬಿಡಿ-ಜೆಡಿಎಸ್ ಮನವಿ

 


ಸುದ್ದಿಲೈವ್/ಶಿವಮೊಗ್ಗ

ಕೇಂದ್ರ ಸಚಿವ ಕುಮಾರ್ ಸ್ವಾಮಿ ಅವರನ್ನ ಕರಿಯಾ ಎಂದು ಕರೆದಿದ್ದಕ್ಕೆ ರಾಜ್ಯಾದ್ಯಂತ ಜೆಡಿಎಸ್ ಪಕ್ಷ ಕರೆದಿರುವ ಪ್ತತಿಭಟನೆ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲೂ ಜಾತ್ಯಾತೀತ ಜನತಾದಳ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. 

ಕೇಂದ್ರ ಸಚಿವ ಕುಮಾರ ಸ್ವಾಮಿ ವಿರುದ್ಧ ಅಸಭ್ಯ ಪದ ಬಳಸಿದ ಮತ್ತು ವರ್ಣ ಬೇಧ ನೀತಿ ಅನುಸರಿಸಿದ ಸಚಿವ ಜಮೀರ್ ಅಹಮದ್ ಖಾನ್‌ರನ್ನ ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಜೆಡಿಎಸ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಶಾಸಕಿ ಶಾರದಾ ಪೂರ್ಯನಾಯ್ಕ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್, ಸೋಮಿನ ಕೊಪ್ಪ ಕಾಂತರಾಜು, ದೀಪಕ್ ಸಿಂಗ್, ರಾಮಕೃಷ್ಣ, ನರಸಿಂಹ ಗಂಧದ ಮನೆ, ಗಣಪತಿ ಎಂ ಸೊರಬ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close