ಸುಬ್ಬಯ್ಯ ಆಸ್ಪತ್ರೆ ಸಮೂಹಗಳ ಅಧ್ಯಕ್ಷರಾದ ಟಿ.ಸುಬ್ಬರಾಮಯ್ಯ ಇನ್ನಿಲ್ಲ



ಸುದ್ದಿಲೈವ್/ಶಿವಮೊಗ್ಗ

ಸುಬ್ಬಯ್ಯ ಆಸ್ಪತ್ರೆ ಸಮೂಹಗಳ ಅಧ್ಯಕ್ಷರಾದ ಹಾಗೂ ನಗರದ ಖ್ಯಾತ ವೈದ್ಯರಾಗಿರುವ ಡಾ.ನಾಗೇಂದ್ರ ಅವರ ತಂದೆ ಟಿ ಸುಬ್ಬರಾಮಯ್ಯ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಶ್ರೀಯುತರಿಗೆ 85 ವರ್ಷಗಳಾಗಿವೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಯುತರು ಮ್ಯಾಕ್ಸ್ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಇಂದು ಬೆಳಗ್ಗಿನ ಜಾವ ಕೊನೆ ಉಸಿರು ಎಳೆದಿದ್ದಾರೆ. ಶ್ರೀಯುತರ ಮೃತದೇಹವನ್ನ ಮನೆಗೆ ತರಲಾಗಿದೆ. 

ಇಂದು ಮಧ್ಯಾಹ್ನ 1-30 ರಿಂದ 3 ಗಂಟೆಯ ಒಳಗೆ ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.

2003 ರಲ್ಲಿ ಸುಬ್ಬಯ್ಯ ಆಸ್ಪತ್ರೆ ಆರಂಭಗೊಂಡಿತು. ತಡಿಕೇಲ ಸುಬ್ಬಯ್ಯ ಟ್ರಸ್ಟ್ ನ ಅಡಿ ಆರಂಭಗೊಂಡ ಸುಬ್ಬಯ್ಯ ಮೆಡಿಕಲ್ ಕಾಲೇಜಿಗೆ ಟಿ.ಸುಬ್ಬರಾಮಯ್ಯನವರೇ ಸಂಸ್ಥಾಕರಾಗಿದ್ದಾರೆ.  ಇದರಿಂದ ಅನೇಕ ವೈದ್ಯರಿಗೆ ಮಾರ್ಗದರ್ಶಿಯಾಗಿದೆ ಈ ಟ್ರಸ್ಟ್.  ಡಾ.ನಾಗೇಂದ್ರ, ಡಾ.ಎಸ್.ಶ್ರೀನಿವಾಸ, ಡಾ.ಲತಾ ತೆಲಂಗ್ ಡಾ.ವಿನಯ ಕುಮಾರಿ ಅವರಿಂದ ವೈದ್ಯಕೀಯ ಅಭ್ಯಾಸ ಆರಂಭಗೊಂಡಿತು. 

ಮೂಲತಃ ಕೃಷಿಕರಾದ ಟಿ.ಸುಬ್ಬರಾಮಯ್ಯ 2003 ರಲ್ಲಿ ಆರಂಭಿಸಲಾದ ಸುಬ್ಬಯ್ಯ ಟ್ರಸ್ಟ್ ಯಶಸ್ವಿಯಾಗಿ ನಡೆಸಿಕೊಂಡು ಬಂದ ಪರಿಣಾಮ ಶಿವಮೊಗ್ಗದಲ್ಲಿ ಮ್ಯಾಕ್ಸ್ ಮತ್ತು  ಭರತ್   ಆಸ್ಪತ್ರೆಗಳ ಹುಟ್ಟಿಗೂ ಕಾರಣವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close