ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆಗೆ ಬಂದಿದ್ದ ಮೂರು ವರ್ಷದ ಬಾಲಕ ತೊಟ್ಟಿಗೆ ಬಿದ್ದು ಸಾವನಪ್ಪಿದ ಘಟನೆ ಇಂದು ಸಂಜೆ ನಡೆದಿದೆ.
ಮತ್ತಿಕೋಟೆಯ ನಿವಾಸಿ ಇಮ್ರಾನ್ ಎಂಬುವರಿಗೆ ಸೇರಿದ ಅಯಾನ್ ಎಂಬ ಮೂರು ವರ್ಷದ ಮಗು ಆಸ್ಪತ್ರೆಯ ತೊಟ್ಟಿಯಲ್ಲಿ ಶವವಾಗಿ ಪತ್ತೆಯಾಗಿದೆ. ಹೆಚ್ಚಿನಮಾಹಿತಿಗಾಗಿ ಕಾಯಲಾಗುತ್ತಿದೆ.
ತೆರೆದ ನೆಲದ ತೊಟ್ಟಿಯಲ್ಲಿ ಮಗು ಬಿದ್ದು ಸಾವನ್ನಪ್ಪಿದ್ದು ಈ ಬಗ್ಗೆ ಸಾರ್ವಜನಿಕರ ಆಕ್ಷೇಪ ಕೇಳಿ ಬರುತ್ತಿದೆ.
ಶಿಕಾರಿಪುರ ತಾಲೂಕಿನ ಮತ್ತಿಕೋಟೆ ಗ್ರಾಮದ ನಿವಾಸಿ ಇಮ್ರಾನ್ ಎಂಬುವರ ಪುತ್ರ ಮಹಮ್ಮದ್ ಐಯಾನ್ ತಂದೆಯ ಸಂಬಂಧಿಕರು ಆಸ್ಪತ್ರೆಗೆ ದಾಖಲಾಗಿದ್ದರು.
ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಮ್ರಾನ್ ಸಂಬಂಧಿಯನ್ನ ವಿಚಾರಿಸಲು ಕುಟುಂಬದವರ ಜೊತೆ ಆಸ್ಪತ್ರೆಗೆ ಆಗಮಿಸಿದ್ದ ಅಯಾನ್ಆಸ್ಪತ್ರೆ ಒಳಗಡೆಯಿಂದ ಆಟವಾಡುತ್ತಾ ಹೊರಗೆ ಬಂದ ತೊಟ್ಟಿಗೆ ಬಿದ್ದಿರ ಬಹುದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ತೊಟ್ಟಿಯ ಬಳಿ ತೆರಳಿದ್ದ ಮಗು ಭರ್ತಿ ನೀರಿದ್ದ ತೊಟ್ಟಿಗೆ ಬಿದ್ದು ಮೃತಪಟ್ಟಿದೆ. ಮೃತಪಟ್ಟ ನಂತರ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಆಸ್ಪತ್ರೆ ಸಿಬ್ಬಂದಿ ಅವರ ನಿರ್ಲಕ್ಷ್ಯದಿಂದ ಮಗು ಸಾವು ಕುಟುಂಬಸ್ಥರ ಆರೋಪಿಸಿದೆ.
ತೊಟ್ಟಿಗೆ ಮುಚ್ಚುಳ ಮುಚ್ಚದಿದ್ದ ಪರಿಣಾಮ ಮಗು ತೊಟ್ಟಿಗೆ ಬಿದ್ದಿದ್ದೆ ಕುಟುಂಬಸ್ಥರ ಆರೋಪಸ್ಥಳಕ್ಕೆ ಶಿಕಾರಿಪುರ ಠಾಣೆ ಪೊಲೀಸರು ಭೇಟಿ ಪರಿಶೀಲನೆ