ವಿಶ್ವ ಮಧುಮೇಹ ದಿನಾಚರಣೆ"ಯ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಮಧುಮೇಹದ ಬಗ್ಗೆ ತರಬೇತಿ ಮತ್ತು ಕಾರ್ಯಾಗಾರ



ಸುದ್ದಿಲೈವ್/ಶಿವಮೊಗ್ಗ

ವಿನ್ ಲೈಫ್, ಮೆಟ್ರೋ ಆಸ್ಪತ್ರೆ, ಡಯಾಬಿಟೀಸ್ ವೆಲ್ ನೆಸ್ ಸೆಂಟರ್ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಧಿಕಾರಿಗಳ ಕಚೇರಿ, ಶಿವಮೊಗ್ಗ ಇವರ ಸಹಯೋಗದೊಂದಿಗೆ "ವಿಶ್ವ ಮಧುಮೇಹ ದಿನಾಚರಣೆ"ಯ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಮಧುಮೇಹದ ಬಗ್ಗೆ ತರಬೇತಿ ಮತ್ತು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ವಿನ್ ಲೈಫ್ ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಮೆಟ್ರೋ ಆಸ್ಪತ್ರೆಯವೈ ದ್ಯಕೀಯ ನಿರ್ದೇಶಕರಾದ ಡಾ. ಪೃಥ್ವಿ ಬಿ. ಸಿ.,  ಕಾರ್ಯಗಾರದಲ್ಲಿ "ಮಧುಮೇಹ @360° (Diabetes @360°) ಎಲ್ಲಾ ಆಯಾಮದಲ್ಲೂ ಮಧುಮೆಹದೊಂದಿಗೆ ನೂರು ವರ್ಷ ಬಾಳಿ" ಇದರ ಬಗ್ಗೆ ಸಮಾಲೋಚನೆ ಮತ್ತು ಉಪನ್ಯಾಸ, ತುರ್ತು ಜೀವರಕ್ಷಕ ತರಬೇತಿ ಮತ್ತು ಕಾರ್ಯಾಗಾರ (CPR), ಸಮತೋಲನ ಆಹಾರ ಪದ್ಧತಿ ಹಾಗೂ ಮೆಡಿಕಲ್ ಯೋಗ ಥೆರಪಿ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗುವುದು ಎಂದರು. 

ಸಕ್ಕರೆ ಖಾಯಿಲೆಗೆ ಸಂಬಂಧಪಟ್ಟ ಎಲ್ಲಾ ಆಧುನಿಕ ಆವಿಷ್ಕಾರವನ್ನು ಪ್ರಾತ್ಯಕ್ಷಿಕವಾಗಿ ತೋರಿಸುತ್ತೇವೆ ಹಾಗೂ ಇದೀಗ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಡಯಾಬಿಟೀಸ್ ನ ಕುರಿತು ಸಂಪೂರ್ಣ ಮತ್ತು ನಿರಂತರ ಮಾಹಿತಿಗಾಗಿ "ಕ್ಯೂಆರ್ ಸ್ಕ್ಯಾನರ್ ಕೋಡ್ " ನ್ನು ಬಿಡುಗಡೆ ಮಾಡಲಾಗುವುದು.    

ಈ ವಿಷಯಗಳ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ದಿನಾಂಕ 12 ನೇ ನವೆಂಬರ್, 2024 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. 

ಪತ್ರಿಕಾಗೋಷ್ಟಿಯಲ್ಲಿ  ನಿರ್ದೇಶಕರುಗಳಾದ ಡಾ. ಶಂಕರ್, ಡಾ. ವಿಜಯ್ ಕುಮಾರ್ ಪಾಟೀಲ್, ಶ್ರೀ ರೆಹಮತ್ ಮತ್ತು ಶ್ರೀ ಬದ್ರಿನಾಥ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close