ಸುದ್ದಿಲೈವ್/ಶಿವಮೊಗ್ಗ
ಇಂದು ಬೆಳಿಗ್ಗೆ 10 ಗಂಟೆಯಿಂದ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಹಾಗೂ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಮತ್ತು ಶಿವಮೊಗ್ಗದ ಆಶಾ ಜ್ಯೋತಿ ರಕ್ತಕೇಂದ್ರ ರವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆದಿದೆ.
ಭದ್ರಾವತಿ ಸಂಚಾರಿ ಠಾಣೆಯ ಹಾಲೇಶಪ್ಪ ಹೆಡ್ ಕಾನ್ ಸ್ಟೇಬಲ್ ರವರ ನೇತೃತ್ವದಲ್ಲಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು
ಸಿಬ್ಬಂದಿಯವರು ಅಧಿಕಾರಿಗಳು ಹಾಗು ಸಾರ್ವಜನಿಕರು ರಕ್ತ ದಾನ ಮಾಡಿದ್ದಾರೆ. ಕರ್ತವ್ಯದ ನಡುವೆಯೂ ಅಧಿಕಾರಿಗಳು ಮತ್ತು ಸಿಬ್ವಂದಿಗಳಿಂದ ರಕ್ತದಾನ ಶಿಬಿರ ಗಮನ ಸೆಳೆದಿದೆ.