ದಂಗೆ ಮತ್ತು ರಕ್ತಕ್ರಾಂತಿಯ ಮಾತನಾಡಿದ್ದ ಮಾಜಿ ಡಿಸಿಎಂ ವಿರುದ್ಧ ಸುಮೋಟೋ ಪ್ರಕರಣ ದಾಖಲು

 


ಸುದ್ದಿಲೈವ್/ಶಿವಮೊಗ್ಗ

ರಕ್ತಕ್ರಾಂತಿಯ ಮಾತನ್ನಾಡಿರುವ ಮಾಜಿ ಡಿಸಿಎಂ ಈಶ್ವರಪ್ಪನವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ. ಪಿಐ ಸಿದ್ದೇಗೌಡರಿಂದ ಈ ಪ್ರಕರಣ ದಾಖಲಾಗಿದೆ.

ಉಪ ಮುಖ್ಯಮಂತ್ರಿಗಳಾದ ಈಶ್ವರಪ್ಪನವರು ನ.13 ರಂದು ಪತ್ರಿಕ ಗೋಷ್ಟಿ ನಡೆಸಿ,  ವಕ್ಸ್ ಪ್ರಕರಣಗಳು ಹೆಚ್ಚಾಗುತ್ತಲೇಹೋಗುತ್ತಿದೆ. ಮುಸ್ಲೀಂರು ಏನೇ ಮಾಡಿದರು ಕಾಂಗ್ರೆಸ್ ಸುಮ್ಮನೆ ಕುಳಿತಿದೆ.  ಶಾಲಾ ಕಾಲೇಜುಗಳು ಪುರಾತತ್ವ ಇಲಾಖೆಯ ಪ್ರದೇಶಗಳನ್ನೂ ಕೂಡ ವಕ್ಫ್ ಆಸ್ತಿ ಎಂದು ಬದಲಾಯಿಸಲಾಗಿದೆ,
ವಿಶ್ವೇಶ್ವರಯ್ಯ ನವರು ಹುಟ್ಟಿದ ಗ್ರಾಮವನ್ನೂ ಇವರು ಬಿಟ್ಟಿಲ್ಲ. ಮತ್ತೊಂದು ಕಡೆ ಮಾಹಿ ಶಾಸಕರು ಅಂಬೇಡ್ಕರ್ ಇಸ್ಲಾಂ ಸೇರಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಹೀಗೆ ಅವಮಾನ ಮಾಡಿದ್ದರ ಕಾಗ್ರೇಸ್ ನ ಒಬ್ಬ ನಾಯಕನ ಕೂಡ ಏಕೆಂದು ಪ್ರಶ್ನೆ ಮಾಡಲಿಲ್ಲ. ಇಸ್ಲಾಮೀಕರಣಕ್ಕೆ ಕಾಂಗ್ರೇಸ್ ನಿರಂತರವಾಗಿ ಪ್ರಯತ್ನಿಸುತ್ತಿದೆ. ಮುಸ್ಲೀಂರಿಗೆ ರಾಜ್ಯ ಸರ್ಕಾರ ಶೇಕಡಾ 4 ರಷ್ಟು ಮೀಸಲಾತಿ ಘೋಷಣೆ ಮಾಡಲು ಹೊರಟಿದ್ದಾರೆ.

ಇವರೇನು ಹಿಂದುಸ್ಥಾನವನ್ನು ಪಾಕಿಸ್ನಾನ ಮಾಡಲು ಹೊರಟಿದ್ದಾರಾ?. ಇದು ಹೀಗೇ ಮುಂದುವರೆದರೆ ಸಾಧು ಸಂತರ ನೇತೃತ್ವದಲಿ ದಂಗೆ ಏಳುವ ಕಾಲ ದೂರವಿಲ್ಲ.  ಕಾಂಗ್ರೆಸಿಗರನ್ನು ಹುಡುಕಿ ಹೊಡೆದು ಕೊಲ್ಲುವಂತಹ ದಿನಗಳು ಬಂದರೂ ಆಶ್ಚರ್ಯವಿಲ್ಲ ಎಂದು‌ಮಾಜಿ ಡಿಸಿಎಂ ಹೇಳುರುವುದು ಸಂಕಷ್ಟಕ್ಕೀಡಾಗಿದೆ.

ಇವುಗಳು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿರುತ್ತವೆ. ಶ್ರೀ.ಕೆ.ಎಸ್ ಈಶ್ವರಪ್ಪ ರವರು ಪತ್ರಿಕಾಗೋಷ್ಟಿ ಸಮಯದಲ್ಲಿ ಅನ್ಯ ಕೋಮಿನ ವಿರುದ್ಧ ದ್ವೇಷ ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಆಸೌಹರ್ದತೆಯನ್ನು ಹತ್ತಿಸುವ ರೀತಿಯಲ್ಲಿ ಅನ್ಯಕೋಮಿಗೆ ಹಾಗೂ ಅನ್ನ ಪಕ್ಷಕ ಉದ್ರೇಕ ಉಂಟಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿದ್ದು, ಈ ರೀತಿ ಪ್ರಚೋದನಕಾರಿ ಮಾತನಾಡಿರುವ ಶ್ರೀ ಕೆಎಸ್ ಈಶ್ವರಪ್ಪ ರವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳುವಂತೆ  ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close