ಸುದ್ದಿಲೈವ್/ಶಿವಮೊಗ್ಗ
ನಿಧಿಗೆ ಬಳಿ ಬಸ್ ವೊಂದು ಮಹಿಳಾ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತರಾಗಿರುವ ಘಟನೆ ವರದಿಯಾಗಿದೆ.
ಮಾಚೇನ ಹಳ್ಳಿಯ ಕೈಗಾರಿಕಾ ಪ್ರದೇಶದಿಂದ ಕೈಗಾರಿಕೆಗಾಗಿ ಕೆಲಸಕ್ಕೆ ಹೋಗುವ ವರ್ಕರ್ ಗಳನ್ನ ಹತ್ತಿಸಿಕೊಂಡು ಶಿವಮೊಗ್ಗಕ್ಕೆ ಹೊರಟಿದ್ದ ಜ್ಯೋತಿ ಸ್ವರೂಪ ಬಸ್ ನಿಧಿಗೆ ಬಸ್ ನಿಲ್ದಾಣದ ಬಳಿ ಪಾದಾಚಾರಿ ಮಹಿಳೆಗೆ ಡಿಕ್ಕಿ ಹೊಡೆದಿದೆ.
ಮಹಿಳೆಯೊಬ್ಬರು ರಸ್ತೆ ದಾಟುವಾಗ ಈ ಘಟನೆ ನಡೆದಿದೆ. ಸ್ಥಳದಲ್ಲಿ ಮೃತಪಟ್ಟವರನ್ನ ರತ್ನಮ್ಮ ಎಂಬ ಸುಮಾರು 55 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ.