ಸುದ್ದಿಲೈವ್/ಶಿವಮೊಗ್ಗ
ಉಪಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಸೋಲು ಬಣಬಡಿದಾಟಕ್ಕೆ ಕಾರಣವಾಗಿದೆ. ಹಾದಿ ಮೇಲೆ ಬೀದಿ ಮೇಲೆ ಬಂದು ನಾಯಕರು ತಮ್ಮ ತಮ್ಮ ನಿಷ್ಠೆ ಎಲ್ಲಿದೆಯೋ ಅಲ್ಲಿಗೆ ವ್ಯಕ್ತಪಡಿಸುತ್ತಿದ್ದಾರೆ. ಒಗ್ಗಟ್ಟಿನ ಮಂತ್ರ ಹೊರತು ಪಡಿಸಿ ನಿಷ್ಠೆಯ ಬಗ್ಗೆ ಮಾತನಾಡಿರುವುದು ಅಚ್ಚರಿ ಮೂಡಿಸಿದೆ.
ಸಧ್ಯಕ್ಕೆ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಕೋಲಾರದಲ್ಲಿ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಮತ್ತು ಮಾಜಿ ಸಚಿವ ಬಿಸಿ ಪಾಟೀಲ್ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ಪರ ಬ್ಯಾಟ್ ಬೀಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ..
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಾಯಕತ್ವದಲ್ಲಿ ಬಿ.ವೈ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ವಿಜಯೇಂದ್ರ ಅವರ ನಾಯಕತ್ವ ಪ್ರಶ್ನಿಸಿದರೆ, ಅದು ನರೇಂದ್ರ ಮೋದಿಯವರ ನಾಯಕತ್ವವನ್ನೇ ಪ್ರಶ್ನಿಸಿದಂತೆ’ ಎಂದು ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು ಎಂದು ಬಿ.ವೈ. ವಿಜಯೇಂದ್ರ ಪರ ಬಣದ 20ಕ್ಕೂ ಹೆಚ್ಚು ನಾಯಕರು ಆಗ್ರಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹಾಗೆ ಮಾಜಿ ಸಚಿವ ರೇಣುಕಾಚಾರ್ಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಾನು ಹಿಂದೂ ಹುಲಿ ಎಂಬುದಾಗಿ ಸ್ವಯಂಘೋಷಣೆ ಮಾಡಿಕೊಂಡಿದ್ದಾರೆ. ಆತ ಹಿಂದೂ ಹುಲಿ ಅಲ್ಲ; ಇಲಿ. ಮುಖವಾಡ ಹಾಕಿಕೊಂಡಿರುವ ಗೋಮುಖ ವ್ಯಾಘ್ರ’ ಎಂದು ಕೋಲಾರದಲ್ಲಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.
ಅದರಂತೆ ಬಿಸಿ ಪಾಟೀಲ್ ಅವರು ಸಹ ವಿಜೇಂದ್ರರ ಪರ ಬ್ಯಾಟ್ ಬೀಸಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಗೆದ್ದು ಬಂದಿದ್ದಾರೆ. ಅವರ ಕ್ಷೇತ್ರ ಬಿಟ್ಟು ಹೊರಬರಲಿ ಅವರ ಸ್ಥಾನ ಏನು ಅಂತ ಗೊತ್ತಾಗುತ್ತೆ. ಬಿಜೆಪಿಯಲ್ಲಿ ಟೀಂ ಇಲ್ಲ ಎಂದಿದ್ದಾರೆ. ನಿಮ್ಮಜೊತೆ ಬಂದ ರಮೇಶ್ ಜಾರಕಿಹೊಳಿ ಯತ್ನಾಳ್ ಟೀಂ ನಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಗೊತ್ತಿಲ್ಲದೆ ಹೋಗಿದ್ದಾರೆ ಕಾದು ನೋಡಿ, ಯತ್ನಾಳ್ ಯಡಿಯೂರಪ್ಪ ಮತ್ತು ವಿಜೇಂದ್ರರವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದರೆ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದನ್ನ ಅರ್ಥಮಾಡಿಕೊಳ್ಳಿ ಎಂದಿದ್ದಾರೆ.
ಆದರೆ, ಯಾರು ಯಾರು ಯತ್ನಾಳ್ ವಿರುದ್ಧ ಬಿಜೆಪಿ ನಾಯಕರು ಮಾತನಾಡಿದ್ದಾರೋ, ಅವರೆಲ್ಲಾ 2023 ರ ಚುನಾವಣೆಯಲ್ಲಿ ಸೋತವರೆ ಎಂಬುದು ಇಲ್ಲಿ ಗಮನಾರ್ಹ.