ಹಫ್ತ ಕೊಡದಿದ್ದಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿ



ಸುದ್ದಿಲೈವ್/ಶಿವಮೊಗ್ಗ

ಹಫ್ತ ಕೊಡದಿದ್ದಕ್ಕೆ ಹಣ್ಣಿನ ಅಂಗಡಿಯನ್ನ ಪೆಟ್ರೋಲ್ ಹಾಕಿ  ಸುಟ್ಟುಹಾಕಿರುವ ಘಟನೆ ಅ.30 ರಂದು ನಡೆದಿದೆ. 

ಶಿವಪ್ಪ ನಾಯಕ ಪ್ರತಿಮೆಯಿಂದ ಗಾಂಧಿಬಜಾರ್ ನ ಎಂಟ್ರೆನ್ಸ್ ಬಳಿ ಬರುವ  ಪಂಚಾತಾರ ಐಸ್ ಕ್ರೀಂ ಪಾರ್ಲರ್ ಬಳಿ ಭವನೇಶ್ವರ್ ಎಂಬ ಯುವಕ ಆಂಜನೇಯ ಹಣ್ಣಿನ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ.  

ಅ.29 ರಂದು ಸಂಜೆ 6 ಗಂಟೆ ಮೋಟು ರಿಯಾಜ್ ಎಂಬಾತ ಕಿಡಿಗೇಡಿ ಅಂಗಡಿ ಬಳಿ ಬಂದು ಹಫ್ತಾ ಕೇಳಿದ್ದಾನೆ. ಹಫ್ತಾ ನಿನಗೇಕೆ ಕೊಡಬೇಕು ಎಂದು ಭುವನೇಶ್ವರ್ ಪ್ರಶ್ನಿಸಿದ್ದಾರೆ. ಹಫ್ತಾ ಕೊಡಲಿಲ್ಲ ನೀನು ವ್ಯಾಪಾರ ಹೇಗೆ ಮಾಡ್ತ್ಯೀಯ ನೋಡ್ತೀನಿ ಬೆಂಕಿ ಹಚ್ಚುವುದಾಗಿ ಬೆದರಿಸಿದ್ದಾನೆ.

ಅ.29 ರಂದು ಅಂಗಡಿ ಬಾಗಿಲು ಹಾಕಿಕೊಂಡು ವಿನೋಬ ನಗರದಲ್ಲಿರುವ ಮನೆಯಲ್ಲಿ ಮಲಗಿದ್ದ ಭುವನೇಶ್ವರ್ ಗೆ ಅ.30 ರಂದು ಬೆಳಗ್ಗಿನ ಜಾವ 3-45 ಕ್ಕೆ  ತಬ್ರೇಜ್ ಎಂಬುವರು ಕರೆ ಮಾಡಿ ನಿನ್ಮ ಅಂಗಡಿಗೆ ಮೋಟು ರಿಯಾಜ್ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾನೆ ಬೇಗ ಬನ್ನಿ ಎಂದಿದ್ದಾರೆ. 


ಸ್ಥಳಕ್ಕೆ ಹೋದ ಭುವನೇಶ್ವರ್ ಗೆ ಶಾಕ್ ಆಗಿದೆ. ಹಣ್ಣುಗಳನ್ನ ತಕ್ಕಡಿಗಳನ್ನ ಹಾಗೂ ಫೈಬರ್ ಶೀಟ್ ಗಳು ಬೆಂಕಿಗೆ ಕರಕಲಾಗಿದ್ದವು. ಒಟ್ಟು 1 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕದಳ ಧಾವಿಸಿ ಬೆಂಕಿ ಆರಿಸಿದೆ


ಈ ಬಗ್ಗೆ ಕೋಟೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.‌ ದೂರು ದಾಖಲಿಸಿಕೊಂಡ ಕೋಟೆ ಪೊಲೀಸರು 24 ಗಂಟೆಯ ಒಳಗೆ ಆರೋಪಿ ಮೋಟು ರಿಯಾಜ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close