ಸುದ್ದಿಲೈವ್/ಶಿವಮೊಗ್ಗ
ಬಾಬರಿ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿದ ಕೊಠಾರಿ ಬ್ರದರ್ಸ್ ಅವರ ಬಲಿದಾನದ ಅಂಗವಾಗಿ ಇಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಶರವತಿ ಪ್ರಖಂಡ ವತಿಯಿಂದ ರಕ್ತದಾನ ಶಿಬಿರ ನಡೆದಿದೆ.
ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಪ್ರಾಣವನ್ನು ತ್ಯಾಗ ಮಾಡಿದಂತಹ ಕೊಠಾರಿ ಸಹೋದರರಾದ ರಾಮ ಕೊಠಾರಿ ಮತ್ತು ಶರತ್ ಕೊಠಾರಿ ಇಬ್ಬರು ಅಣ್ಣ-ತಮ್ಮಂದಿರು ಇವರಿಬ್ಬರೂ ಸಹ ಬಜರಂಗದಳದ ಕಾರ್ಯಕರ್ತರು ಆಗಿದ್ದರು. ಇಡೀ ದೇಶದಲ್ಲಿ ಕೇಸರಿ ಧ್ವಜವನ್ನು ನಮ್ಮ ಮನೆಯ ಮೇಲೆ ಹಾರಿಸಲಕ್ಕೂ ಸಹ ಹೆದರುವಂತಹ ಸಂದರ್ಭದಲ್ಲಿ ಇಡೀ ಭಾರತ ದೇಶದ ಕಳಂಕಿತ ವಾಗಿದಂತಹ ಬಾಬರಿ ಮಸೀದಿ ಮೇಲೆ ಮೊಟ್ಟಮೊದಲನೆ ಬಾರಿಗೆ ಕೇಸರಿ ಧ್ವಜವನ್ನು ಆರಿಸಿದ್ದರು.
ಭಾರತ ಮಾತೆಯ ಹೆಮ್ಮೆಯ ಪುತ್ರರು ಇವರ ಬಲಿದಾನ ಅಂಗವಾಗಿ ಬಜರಂಗದಳವು ಪ್ರತಿ ವರ್ಷವೂ ರಕ್ತದಾನ ಶಿಬಿರವನ್ನು ಹಿಡಿದಿದ್ದ ದೇಶಾದ್ಯಂತ ಆಯೋಜನೆ ಮಾಡುತ್ತದೆ ಹಾಗೆ ಶಿವಮೊಗ್ಗ ನಗರದಲ್ಲೂ ಸಹ ಆಯೋಜನೆ ಮಾಡಲಾಗಿದೆ ಈ ಸಂದರ್ಭದಲ್ಲಿ ಬಜರಂಗದಳ ಶಿವಮೊಗ್ಗ ವಿಭಾಗ ಸಂರಾಜಕರಾದ ರಾಜೇಶ್ ಗೌಡ ಜಿಲ್ಲಾ ಕಾರ್ಯದರ್ಶಿಯಾದ ನಾರಾಯಣ ವರ್ಣೇಕರ್ ನಗರ ಕಾರ್ಯದರ್ಶಿಯಾದ ಅರವಿಂದ್ ರಜಾದ ಶರಾವತಿ ಪ್ರಖಂಡ ಅಧ್ಯಕ್ಷರಾದ ಕೃಪಾನಂದ ನಾಯಕ್ ಕಾರ್ಯದರ್ಶಿಯಾದ ಶರತ್ ದುರ್ಗಿ ಪ್ರಕಂಡಕ ಅಧ್ಯಕ್ಷರಾದ ಪ್ರಶಾಂತ್ ಪುಟ್ಟಣ್ಣ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು