ಗಲಾಟೆ, ದೊಂಬಿ, ಯಡವಟ್ಟಿನಿಂದ ಕೂಡಿದ ಜಿಲ್ಲಾ ಯುವಜನೋತ್ಸವ ಕಾರ್ಯಕ್ರಮ



ಸುದ್ದಿಲೈವ್/ಶಿವಮೊಗ್ಗ

ಪ್ರತಿವರ್ಷದಂತೆ ಈ ವರ್ಷವೂ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಗೊಂದಲ ಮುಂದುವರೆದಿದೆ. 

ಪ್ರತಿವರ್ಷ ಈ ಯುವಜನೋತ್ಸವ ಕಾರ್ಯಕ್ರದಲ್ಲಿ ಫಸ್ಟ್ ಪ್ರೈಸ್ ಯಾರಿಗೆ ಎಂಬುದೇ ದೊಡ್ಡಗೊಂದಲ ಮೂಡಿ ಗಲಾಟೆಯಾಗಿ ನಂತರ ಒಂದು ದಿನ ಪ್ರಶಸ್ತಿ ಪಡೆಯುವ ದಿನಾಂಕ ಘೋಷಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತಿತ್ತು. ಈ ಬಾರಿಯೂ ಅದೇ ರೀತಿ ನಡೆದಿದೆ. ಮಂಗಳವಾರಕ್ಕೆ ಪ್ರಶಸ್ತಿ ಪ್ರಕಟಿಸಲಾಗುತ್ತದೆ ಎಂದು ಘೋಷಿಸುವ ಮೂಲಕ ತೇಪೆ ಹಚ್ಚುವ ಕೆಲಸ ಮುಂದುವರೆದಿದೆ. 

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ನೆಹರು ಯುವ ಕೇಂದ್ರ ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾನಿಲಯ ಹಾಗೂ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದಿದೆ. 

ಜನಪದ ತಂಡದಲ್ಲಿ ಭಾಗವಹಿಸಿದ್ದ 8 ತಂಡಗಳು ಭಾಗಿಯಾಗಿ ಅತ್ಯುತ್ತಮ ಪ್ರದರ್ಶನ ನಡೆಸಿದ್ದಾರೆ. ಪ್ರಥಮ ಪ್ರಶಸ್ತಿಯನ್ನ ಕೊಟ್ಟು ನಂತರ ವಾಪಾಸ್ ಇಸ್ಕೊಂಡು ಮಂಗಳವಾರಕ್ಕೆ ಪ್ರಶಸ್ತಿ ಪ್ರಕಟಿಸುವುದಾಗಿ ತೀರ್ಮಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಒಂದು, ಎರಡು, ಮೂರು ಎಂದು ವಿವಿಧ ತಾಲೂಕಿನಿಂದ ಬಂದ ಒಟ್ಟು 8 ತಂಡಕ್ಕೆ ನಂಬರ್ ನೀಡಲಾಗುತ್ತದೆ. 

ಮೊದಲಿಗೆ ಸೊರಬ ತಂಡಕ್ಕೆ ಮೊದಲ ಬಹುಮಾನ  ಘೋಷಿಸಲಾಗಿತ್ತು.  ನೀಡಿದ ಬಹುಮಾನ ಸರಿಯಿಲ್ಲವೆಂದು ಎದ್ದ ಗೊಂದಲದಿಂದ  ಗಲಾಟೆಯಾಗಿದೆ. ಗಲಾಟೆಯಿಂದಾಗಿ ಬಹುಮಾನ ಮುಂದೂಡಲಾಗಿದೆ. ಮಂಗಳವಾರಕ್ಕೆ ಪ್ರಕಟಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮಕ್ಕೆ  ಜಡ್ಜಾಗಿ ಬಂದವರು ಸರಿಯಾದ ತೀರ್ಮಾನ ನೀಡಿದರೂ ಬಹುಮಾನ ಪ್ರಕಟಿಸುವ ವೇಳೆ ಯಡವಟ್ಟಾಗಿದೆ. ಇದನ್ನ ಆಯೋಜಕರೇ ಮಾಡಿರುವುದಾಗಿ ಹೆಸರು ಹೇಳಲು ಇಚ್ಚಿಸದ ಅಧಿಕಾರಿಗಳು ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close