ಹೊಸ ಚಿಂತನೆಗಳು ನಿರಂತರವಾಗಿ ಬರಬೇಕು-ಡಿ.ಎಸ್.ಅರುಣ್



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ "ಅನವರತ" ಅರ್ಪಿಸುವ ಸಿಹಿಮೊಗ್ಗೆ  ಸಂಭ್ರಮ ಮಲೆನಾಡ ಮಣ್ಣಿನ ಸಾಂಸ್ಕೃತಿಕ ಸೊಗಡು ಕಾರ್ಯಕ್ರಮವನ್ನು ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ. ಡಿ.ಎಸ್.ಅರುಣ್ ಅವರು ಉದ್ಘಾಟಿಸಿ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಳ್ಳೆಯ ವಿಷಯಗಳ ಕುರಿತು  ಹೊಸ ಹೊಸ ಚಿಂತನೆಗಳು ನಿರಂತರವಾಗಿ ಬರಬೇಕು ಎಂದರು. ಒಟ್ಟು ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳು ಒಂದೇ ತರದ  ಕೆಲಸಕ್ಕೆ ಆದ್ಯತೆ ನೀಡದೆ ಇಂತಹ ಸಾಂಸ್ಕೃತಿಕ ಕಲೆಗಳಿಗೆ ಪೊತ್ಸಾಹ ನೀಡುತ್ತಿರುವುದು ಅಗತ್ಯವಾಗಿದೆ. ವ್ಯಕ್ತಿ ನಿರ್ಮಾಣ ಮಾಡುವುದು ಅವಶ್ಯವಾಗಿದೆ.ಇಂದಿನ ಯುವ ಪೀಳಿಗೆ ಹಾಗೂ ಸಾರ್ವಜನಿಕರನ್ನು ಒಂದು ಗೊಡಿಸಿಕೊಂಡು ಹೋದಾಗ ಮಾತ್ರ ನಮ್ಮ ವ್ಯವಸ್ಥೆಯಲ್ಲಿ ಸುಂದರವಾಗು  ನಿರ್ಮಾಣಿಸುವುದು ಸಾಧ್ಯ .ಇಂತಹ ವೇದಿಕೆಗಳುನ್ನು ನಾವು  ಸೃಷ್ಟಿಸಿಕೊಂಡು ಹೋದಾಗ ಮಾತ್ರ ಅಳಿವಿನಲ್ಲಿರುವ ನಮ್ಮ ಜನಪದ ಕಲೆಗಳನ್ನು ಉಳಿಸಿಕೊಂಡು  ಹೋಗುವುದು ನಮ್ಮ ಆದ್ಯ ಕರ್ತವ್ಯ ಆಗಿದೆ ಎಂದರು. 

ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ಶಾಸಕರು ಹಾಗೂ ಅನವರತ ಗೌರವಾಧ್ಯಕ್ಷರಾದ ಶ್ರೀ. ಎಸ್.ಎನ್.ಚನ್ನಬಸಪ್ಪ. ಕಾಲೇಜು ಶಿಕ್ಷಣದ ಜಂಟಿ ನಿರ್ದೇಶಕರಾದ ಶ್ರೀ. ಡಾ.ವಿಷ್ಣುಮೂರ್ತಿ. ರಂಗಾಯಣದ ಆಡಳಿತಾಧಿಕಾರಿಗಳಾದ ಶ್ರೀಮತಿ ಶೈಲಜ ಮತ್ತು ಅನವರತದ ಅಧ್ಯಕ್ಷರಾದ ಶ್ರೀ.ಜಗದೀಶ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close