ಸುದ್ದಿಲೈವ್/ಶಿವಮೊಗ್ಗ
ನ.26 ರಂದು 500 ಜಿಲ್ಲಗಳಲ್ಲಿ ರೈತರ ಕಾರ್ಮಿಕರ ಎಚ್ಚರಿಕಾ ರ‌್ಯಾಲಿ ನಡೆಯಲಿದೆ. ವಕ್ಫ್ ಆಸ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರದ್ದು ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೋರೇಟರ್ ನೀತಿಯಿಂದ ರೈತರು, ಕಾರ್ಮಿಕರು, ದುಡಿಯುವ ಜನರ ಜೊತೆಗೆ ಪಟ್ಟಣದಲ್ಲಿರುವ ಸಣ್ಣಪುಟ್ಟ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಿಗಳು, ಬೀದಿಗೆ ಬರುವಂತಾಗಿದೆ ಎಂದರು.
ಈ ಬಗ್ಗೆ ಹಕ್ಕೋತ್ತಾಯ ನಡೆಸಿದ ಕಳಸ ಬಂಡೂರಿ ಯೋಜನೆಗೆ ಅಗತ್ಯ ಕಾನೂನಿಗೆ ಒಪ್ಪಿಗೆ ನೀಡಿ ಕಾಮಗಾರಿಗೆ ಚಾಲನೆ ನೀಡಬೇಕು. ಎಂಎಸ್ ಪಿಯನ್ನ ಮೌಲ್ಯಾಧಾರಿತವಾಗಿ ಕಾನೂನು ಬದ್ಧ ಮಾಡಬೇಕು. ವಿದ್ಯೂತ್ ಖಾಸಗೀಕರಣ ಮಾಡುವುದನ್ನ ತಡೆಯಬೇಕು. ಕೃಷಿ ಐಪಿ ಸೆಟ್ ಗಳಿಗೆ ಆಧಾರ ನಂಬರ್ ಜೋಡಣೆ ಕೈಬಿಡಬೇಕು.
ಕೃಷಿ ಉಪಕರಣಗಳಿಗೆ ಜಿಎಸ್ ಟಿ ರದ್ದುಗೊಳ್ಳಬೇಕು. ರೈತರ ಸಾಲಕ್ಕೆ ಸಿಬಿಲ್ ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ಹಲವು ಹಕ್ಕೋತ್ತಾಯವನ್ನ ಅವರು ಮಾಡಿದರು.