ಸುದ್ದಿಲೈವ್/ಶಿವಮೊಗ್ಗ
ಸರ್ಕಾರಿ ಶಾಲೆಗಳು ಅಪಾಯದ ಅಂಚಿಗೆ ಬಂದು ತಲುಪಿದ್ದು ಮಕ್ಕಳ ಅನ್ನಕ್ಕೆ ಕನ್ನಹಾಕುತ್ತಿದ್ದಾರೆ ಎಂದು ಪೀಸ್ ಆರ್ಗನೈಜೇಷನ್ ರಿಯಾಜ್ ಅಹಮದ್ ಮತ್ತು ಇತರೆ ಶಾಲಾ ಎಸ್ ಡಿ ಎಂಸಿ ಗಂಭೀರ ಆರೋಪಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ,ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯಾಧ್ಯಕ್ಷ ರಾಜೀವ್ ಮಾತನಾಡಿ ಗೋಂದಿ ಚಟ್ನಹಳ್ಳಿ ಶಾಲಾ ಅಭಿವೃದ್ಧಿ 160 ಜನರಿದ್ದು, 20 ಮೂಟೆ ಅಕ್ಲಿ ಇಂಡೆಂಟ್ ಹಾಕಿದ್ದು ಎರಡು ಚಿಲ ಇಳಿಸಿಕೊಂಡು ಉಳಿದ 18 ಚೀಲ ವಾಪಾಸ್ ಬೇರೆಡೆ ಕಳುಹಿಸಲಾಗಿದೆ. ಜೊತೆಗೆ ಶಿಕ್ಷಕರು ಪಿಎಂ ಪೋಷಣ್ ಅಭಿಯಾನವನ್ನ ದುರ್ಬಳಕೆ ಮಾಡಿಕೊಙಡಿರುವ ಬಗ್ಗೆ ದಾಖಲಾತಿ ಸಮೇತ ದೂರು ನೀಡಿದರು ಸಹ ಕ್ರಮ ಜರುಗಿಲ್ಲವೆಂದು ದೂರಿದರು.
ಎಸ್ ಡಿಎಂಸಿ ವೇದಿಕೆಯ ಸಂಯೋಜಕ ವೀರಾಚಾರ್ ಮಾತನಾಡಿ, ನ್ಯೂಮಂಡ್ಲಿ ಸರ್ಕಾರಿ ಶಾಲೆಯಲ್ಲಿ ಅವ್ಯವಹಾರವಾಗಿದ್ದು, ಅಕ್ಷರ ದಾಸೋಹದಲ್ಲಿ ಭ್ರಷ್ಟಾಚಾರ ನಡೆದಿತ್ತು. ಅಕ್ಷರ ದಾಸೋಹಕ್ಕೆ ಬರುವ ದಾಸ್ತಾನಿಗೂ ಮತ್ತು ಖರ್ಚಿಗೂ ವ್ಯತ್ಯಾಸವಾಗಿತ್ತು. ನಾಲ್ಕು ಚೀಲ ಅಕ್ಕಿಯನ್ನು ಶಾಲೆಯ ಗೇಟ್ ಹೊರಗಡೆ ಇಡ್ತಾರೆ,
ಇದನ್ನ ಪ್ರಶ್ನಿಸಿದರೆ, ಅಕ್ಕಿ ಕ್ಲೀನಿಂಗ್ ಮಾಡುವುದಾಗಿ ಹೇಳ್ತಾರೆ. ಚೀಲ ಬೇಳೆಯನ್ನ ಸಿಂಟೆಕ್ಸ್ ನಲ್ಲಿ ಮುಚ್ಚಿಡಲಾಗಿದೆ. ದಾಸ್ತಾನು ಇದ್ದರು ಹೆಚ್ಚಿನ ಬೇಡಿಕೆ ಇಂಡೆಂಟ್ ಹಾಕಲಾಗಿದೆ. ಬಿಇಒಗೆ ದೂರು ನೀಡಿದಾಗ ಸ್ಥಳಕ್ಕೆ ಬಂದವರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಹೊಳಲೂರು ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷೆ ರಂಜಿತಾರವರು ಮಾತನಾಡಿ, ನಮ್ಮ ಶಾಲೆಯ ಮುಖ್ಯ ಶಿಕ್ಷಕಿಯರು ಕೊಳೆತ ತರಕಾರಿ ತಂದು ಅಡುಗೆ ಮಾಡಿರುವ ಆರೋಪದ ಅಡಿ ಅವರನ್ನ ಒಂದು ವರ್ಷದ ಹಿಂದೆ ವರ್ಗಾವಣೆ ಮಾಡಲಾಗಿತ್ತು. ಈಗ ಮತ್ತೆ ಒಂದು ವರ್ಷದ ನಂತರ ವಾಪಾಸ್ ಆ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಈಗ 96 ಕೆಜಿ ಬೇಳೆಯನ್ನ ಓಮನಿ ವಾಹನದಲ್ಲಿ ತೆಗೆದುಕೊಂಡು ಹೋಗಿರುವ ಬಗ್ಗೆ ದಾಖಲೆಗಳಿವೆ. ದುರ್ಬಳಕೆ ಮಾಡಿಕೊಂಡಿದ್ದಾರೆ. ಮೇಲಾಧಿಕಾರಿಗಳ ಗಮನದಲ್ಲಿದ್ದರೂ ತಕ್ಕ ಕ್ರಮ ಆಗ್ತಾ ಇಲ್ಲ ಎಂದು ದೂರಿದರು.
ಹೀಗೆ ಆದರೆ ಸರ್ಕಾರಿ ಶಾಲೆ ಮುಚ್ಚಲಾಗುತ್ತದೆ. 130 ವಿದ್ಯಾರ್ಥಿಗಳಿದ್ದ ಸಂಖ್ಯೆ 90 ಜನಕ್ಕೆ ಇಳಿದಿದೆ. ಜಿಪಂ ಸಿಇಒ ಗಳಿಗೆ ಮನವಿ ಮಾಡಿದರೆ 1 ಟು 4 ಜಾರಿಯಾಗಿದೆ ಎಂದು ಹೇಳ್ತಾರೆ. ಆದರೆ ಆರೋಪವಿರುವ ಯಾವ ಶಿಕ್ಷಕರಿಗೂ 1 ಟು 4 ಅಡಿಯಲ್ಲಿ ಇಂಕ್ರಿಮೆಂಟ್ಸ್ ಆಗಲಿ, ಭತ್ಯೆಯಾಗಲಿ ಕಟ್ ಆಗಿಲ್ಲವೆಂದು ದೂರಿದರು.
ಪೀಸ್ ಅರ್ಗನೈಜೇಷನ್ ನ ಅಧ್ಯಕ್ಷ ರಿಯಾಜ್ ಅಹಮದ್ ಮಾತನಾಡಿ, ಮುಖ್ಯಶಿಕ್ಷಕರ ಕಾರು ಗಳು ಆಟೋಗಳು ಸರ್ಕಾರಿ ಶಾಲೆಯ ಒಳಗೆ ಬರ್ತಾವೆ. ಬಿಲ್ ಗಾಗಿ ಮುಖ್ಯಶಿಕ್ಷಕರು ಶಾಲೆ ಬರುತ್ತಿದ್ದಾರೆ. ಸಸ್ಫೆಂಡ್ ಮಾಡದೆ ಸಿಇಒ ಗಳು ರಾಜೀ ಸಂಧಾನ ಮಾಡ್ತಾರೆ ಬಡ ಮಕ್ಕಳು ಸರ್ಕಾರಿ ಶಾಲೆಗೆ ಬಂದರೆ ಉತ್ತಮ ಶಿಕ್ಷಣ ಆಗಲಿ ಸರ್ಕಾರಿ ಸವಲತ್ತಾಗಲಿ ಸಿಗುವ ಬಗ್ಗೆ ಭರವಸೆ ಇಲ್ಲವೆಂದು ದೂರಿದರು.
ಎಸ್ ಡಿಎಂಸಿಯವರಿಗೆ ಏನೂ ಕೆಲಸವಿಲ್ಲ ಬರಬೇಕು ಹೋಗುವಂತೆ ಶಿಕ್ಷಕರು ಧಮ್ಕಿ ಹಾಕ್ತಾರೆ. ಮುಖ್ಯ ಶಿಕ್ಷಕರು ರಾಜಕೀಯ ಪುಡಾರಿಗಳಾಗಿದ್ದಾರೆ. ಆರೋಪ ಎದುರಿಸುವ ಶಿಕ್ಷಕರಿಗೆ ಸಸ್ಪೆಂಡ್ ಮತ್ತು ಹೊರಜಿಲ್ಲೆಗೆ ವರ್ಗಾವಣೆಗಳು ಮಾಡ್ತಾ ಇಲ್ಲ. ಜಯಂತಿಯ ದಿನ ಶಾಲೆಗೆ ಬಾರದ ಶಿಕ್ಷಕರು ಮಕ್ಕಳಿಗೆ ಜಯಂತಿಯ ಮಹತ್ವ ತಿಳಿಸದೆ ಮನೆಯಲ್ಲೇ ಕುಳಿತು ಫೋಟೊ ಹಾಕುತ್ತಾರೆ ಎಂದು ದೂರಿದರು.
ಅಕ್ಷರ ದಾಸೋಹದ ಬಗ್ಗೆ ಕೇಳಿದರೆ ಶಿಕ್ಷಕಿಯರು ಅವ್ಯಚ್ಯ ಶಬ್ದಗಳಲ್ಲಿ ಬೈದಿದ್ದಾರೆ. ಸರ್ಕಾರಿ ಅಧಿಕಾರಿಗಳು ಇವರನ್ನರಕ್ಷಣೆಗೆ ನಿಂತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ದುರಾಡಳಿತ ನಡೆಯುತ್ತಿದೆ ಎಂದರು.ಇದರಿಂದ ಎಚ್ಚೆತ್ತುಕೊಳ್ಳದಿದ್ಧರೆ ಶಾಲೆಗಳನ್ನಬಂದ್ ಮಾಡಿ ಶಿಕ್ಷಕರ ಮನೆ ಮುಂದೆ ಪ್ರತಿಭಟಿಸಲಾಗುವುದು ಎಂದರು.