ಅಪಘಾತ ನಡೆಸಿದ ವ್ಯಕ್ತಿ ಪತ್ತೆಗೆ ಮನವಿ


ಸುದ್ದಿಲೈವ್/ಶಿವಮೊಗ್ಗ

 ಅ. 10 ರಂದು ರಾತ್ರಿ 7.20 ಕ್ಕೆ ನಗರದ ಸಾಗರ ರಸ್ತೆ ಹೆಲಿಪ್ಯಾಡ್ ಸರ್ಕಲ್ ಬಳಿ ಶಶಿಕುಮಾರ್ ಎಂಬುವವರ ದ್ವಿಚಕ್ರ ವಾಹನದ ಹಿಂಭಾಗಕ್ಕೆ ಅನಾಮಧೇಯ ವ್ಯಕ್ತಿಯೋರ್ವರು ಮೋಟಾರ್ ಬೈಕ್‌ನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾರೆ.

 ಗಾಯಾಳುಗಳಾದ ಶಶಿಕುಮಾರ್ ಹಾಗೂ ಶಫಿ ಅಹ್ಮದ್ ಈ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಬೈಕ್ ನಿಂದ ಡಿಕ್ಕಿ ಹೊಡೆಸಿ ಅನಾಮಧೇಯ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಮಾತನಾಡಿಸಿಕೊಂಡು ಹೋಗಿರುತ್ತಾನೆ. ಆದರೆ ಅಪರಿಚಿತ ಬೈಕ್ ಸವಾರ ಮತ್ತು ಬೈಕಿನ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಈ ಭಾವಚಿತ್ರದಲ್ಲಿರುವ ವ್ಯಕ್ತಿಯನ್ನು ನೋಡಿದವರು ಪಿ.ಎಸ್.ಐ ಪಶ್ಚಿವi ಸಂಚಾರ ಪೊಲೀಸ್ ಠಾಣೆ ಮೊ.ನಂ. 9480803346 ಮತ್ತು ದೂ. ಸಂ. 08182 261417 ಮಾಹಿತಿ ನೀಡುವಂತೆ ಪಶ್ಚಿವi ಸಂಚಾರ


ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close