ಸುದ್ದಿಲೈವ್/ಶಿವಮೊಗ್ಗ
ನಗರದ ಹೊರವಲಯದಲ್ಲಿ ರಸ್ತೆ ಅಪಘಾತ ನಡೆದಿದ್ದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ಕಾನೇಹಳ್ಳ ಕ್ರಾಸ್ ಬಳಿ ನಡೆದಿದೆ.
ಗಾಜನೂರಿನ ಐಟಿಐ ಕಾಲೇಜಿನ ವಿದ್ಯಾರ್ಥಿಗಳಾದ(20) ನಿಸಾರ್ ಆರ್ ಎಂ ಎಲ್ ನಗರ ನಿವಾಸಿಯಾಗಿದ್ದರೆ, ಮತ್ತೋರ್ವ ವಿದ್ಯಾರ್ಥಿಯಾಗಿದ್ದು ಯಶವಂತ್ ಎಂಬ ಯುವಕ ಮಂಜುನಾಥ ಬಡಾವಣೆ ನಿವಾಸಿಯಾಗಿದ್ದಾರೆ. ಕಾಲೇಜಿಗೆ ತೆರಳುವಾಗ ಅಪಘಾತ ಸಬವಿಸಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಕೆಟಿಎಂ ಬೈಕ್ ನಲ್ಲಿ ನಿಸಾರ್ ಮತ್ತು ಯಶವಂತ್ ಕಾಲೇಜಿಗೆ ಹೋಗುವಾಗ ಕಾನೇಹಳ್ಳದ ಕ್ರಾಸ್ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಜಾಹೀರಾತುವಿನ ಹ್ಯಾಂಗರ್ ಕಂಬಕ್ಕೆ ಗುದ್ದಿದ್ದಾನೆ. ಬೈಕ್ ಸವಾರನ ಇಬ್ಬರ ತಲೆಗೂ ಬಲವಾದ ಹೊಡೆತ ಬಿದ್ದಿದ್ದರಿಂದ ಇಬ್ಬರೂ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.
ಕೆಟಿಎಂ ಬೈಕ್ ನ್ನ ಯಶವಂತ್ ಚಲಾಯಿಸುವಾಗ ಈ ಘಟನೆ ನಡೆದಿದೆ. ತುಂಗ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಇಬ್ಬರ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಯಶವಂತ್ ದ್ವಿತೀಯ ವರ್ಷದ ಐಟಿಐ ವಿದ್ಯಾರ್ಥಿಯಾದರೆ, ನಿಸಾರ್ ಮೊದಲನೆ ವರ್ಷದ ಐಟಿಐ ವಿದ್ಯಾರ್ಥಿಯಾಗಿದ್ದಾನೆ.