ಅರಣ್ಯ ಇಲಾಖೆ ವಾಚರ್ ಗಳ ಮೇಲೆ ಹಲ್ಲೆ




ಸುದ್ದಿಲೈವ್/ಸೊರಬ

ಅರಣ್ಯ ಭೂಮಿ ಒತ್ತೂವರಿದಾರರರಿಂದ ಬೀಟ್ ಫಾರೆಸ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಫ್ ಒ ಮೋಹನ್ ಕುಮಾರ್ ಹೇಳಿದರು. 

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ತಾಲೂಕಿನ ಗಡಿಭಾಗ ಚಿಕ್ಕಲಗೋಡು ಗ್ರಾಮದಲ್ಲಿ ಶಿರಸಿ ಭಾಗದಿಂದ ಆನೆ ಗಳ ಹಿಂಡು ಕಾಣಿಸಿಕೊಂಡಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಹಿನ್ನೆಲೆ ಬೀಟ್ ಫಾರಸ್ಟರ್ ಗಳಾದ ಉಮೇಶ್ ಹಾಗೂ ಇಮ್ರಾನ್ ಅವರು ಸ್ಥಳ ಪರಿಶೀಲನೆಗೆ ತೆರಳಿದ್ದಾರೆ. ಈ ವೇಳೆ ಚಿಕ್ಕಲಗೋಡು ಗ್ರಾಮದ ಸರ್ವೆ ನಂ. 25ರಲ್ಲಿನ ರಾಜ್ಯ ಅರಣ್ಯದಲ್ಲಿ ಒತ್ತೂವರಿ ಮಾಡಿ ಅನಾನಸ್ ಬೆಳೆದಿದ್ದು ಮಾತ್ರವಲ್ಲದೇ, ಪ್ಲಾಂಟೇಷನ್ ನಲ್ಲಿ ಲಾರಿ ಸಂಚಾರಕ್ಕಾಗಿ ಗಿಡಗಳನ್ನು ಕಡಿಯಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದ ಬೀಟ್ ಫಾರೆಸ್ಟರ್ ಮೇಲೆ ರಶೀದ್ ಬನವಾಸಿ ಎಂಬಾತ ದಿಢೀರನೇ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಬೀಟ್ ಫಾರೆಸ್ಟರ್ ಅವರನ್ನು ಸೊರಬದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಚಿಕ್ಕಲಗೋಡು ಗ್ರಾಮದ ಸ್ಟೇಟ್ ಫಾರೆಸ್ಟ್ ಒತ್ತೂವರಿ ಮಾಡಿದ್ದ ಶಿವಪ್ಪ ಈರಪ್ಪ ಹಾಗೂ ಬಸಪ್ಪ ಈರಪ್ಪ ಅವರ ಮೇಲೆಯೂ ಪ್ರಕರಣ ದಾಖಲಾಗಿದ್ದು, ಇವರಿಂದ ಗುತ್ತಿಗೆ ಪಡೆದು ಅನಾನಸ್ ಬೆಳೆದಿದ್ದ ರಫೀಕ್ ಬನವಾಸಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ರಫೀಕ್ ಪರಾರಿಯಾಗಿದ್ದಾನೆ ಎಂದರು. 


ಇನ್ನು ಅಕ್ರಮವಾಗಿ ಸ್ಟೇಟ್ ಫಾರೆಸ್ಟ್ ನಲ್ಲಿ ಚಲಾಯಿಸಿದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಲಾರಿಯಲ್ಲಿದ್ದ ಅನಾನಸ್ ಹಣ್ಣನ್ನು ನ್ಯಾಯಾಲಯದ ಅನುಮತಿ ಪಡೆದು ಹರಾಜು ಮಾಡಲಾಗುವುದು ಎಂದು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close