ಏಷಿಯನ್ ನೆಟ್ ವರ್ಕ್ ಕಚೇರಿಗೆ ನುಗ್ಗಿ ಹಾನಿಮಾಡಿದ ಆರೋಪಿಗೆ ಶಿಕ್ಷೆ




ಸುದ್ದಿಲೈವ್/ಶಿವಮೊಗ್ಗ

2020 ರಲ್ಲಿ ನಗರದ ಏಷ್ಯಾ ನೆಟ್ ವರ್ಕ್ ಕಚೇರಿಗೆ ನುಗ್ಗಿ 85 ಸಾವಿರ ರೂ. ಮೌಲ್ಯದ ಡೆಸ್ಕ್ ಟಾಪ್ ಮತ್ತು ಗ್ಲಾಜುಗಳನ್ನ ಒಡೆದ ಘಟನೆಗೆ ಸಂಬಂಧಿಸಿದಂತೆ ಇಂದು ಎರಡನೆಯ JMFC ನ್ಯಾಯಾಲಯವು ಆರೋಪಿಗೆ ದಂಡ ವಿಧಿಸಿ ತೀರ್ಪು ನೀಡಿದೆ. 

ಪ್ರಕರಣದ  ಆರೋಪಿ ಪ್ರಕಾಶ್ ಎಚ್ ವಿ 2020 ಜನವರಿ ತಿಂಗಳಲ್ಲಿ ನಗರದ  ಸಾವರ್ ಲೈನ್  ರಸ್ತೆಯ  ನೇಹಾ ನಿಹಾಲ್ ಆರ್ಕೆಡ್ ನಲ್ಲಿರುವ  ಏಷ್ಯಾ ನೆಟ್ ವರ್ಕ್ ಕಚೇರಿಗೆ ನುಗ್ಗಿ ಅತಿಕ್ರಮ ಪ್ರವೇಶ ಮಾಡಿ ಸರಿಯಾಗಿ ಕನೆಕ್ಷನ್ ಕೊಡಲು  ಆಗುವುದಿಲ್ಲವಾ   ಎಂದು ಕೂಗಾಡಿ  ತಾನು ತಂದಿದ್ದ  ಕಲ್ಲಿನಿಂದ  ಕಚೇರಿಯ 02 ಕಂಪ್ಯೂಟರ್ ಮಾನಿಟರ್ ಗಳನ್ನು  ಮತ್ತು ಕಚೇರಿಯ  ಪಾರ್ಟಿಷಿಯನ್  ಗ್ಲಾಸ್ ಗಳನ್ನ ಹಾಳು ಮಾಡಿದ್ದನು. 

ಕಲ್ಲು ಮತ್ತು   ಸ್ಟೂಲ್  ನಿಂದ ಹೊಡೆದು  ಸಂಸ್ಥೆಗೆ  ಸುಮಾರು 85 ಸಾವಿರ ರೂ.  ರೂಪಾಯಿ ಗಳಷ್ಟು  ನಷ್ಟ ಉಂಟು ಮಾಡಿರುತ್ತಾರೆ  ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಕಾಧಿಕಾರಿಯಾಗಿ ಪೋಲಿಸ್ ಉಪನಿರೀಕ್ಷಕರಾಗಿದ್ದ  ಶ್ರೀ  ಎಂ ವೈ   ಶಂಕರ ಮೂರ್ತಿ ಅವರು  ತನಿಖೆ ಕೈಗೊಂಡು  ಆರೋಪ  ಸಾಬೀತಾಗಿದ್ದರಿಂದ ದೋಷಾರೋಪಣ  ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 

ಇಲ್ಲಿನ ಎರಡನೇ ಜೆಎಂಎಫ್ ಸಿ ನ್ಯಾಯಾಲಯ ಶಿವಮೊಗ್ಗ ಇಲ್ಲಿ  ಸಾಕ್ಷಿ ವಿಚಾರಣೆ ನಡೆದು  ನ್ಯಾಯಾಧೀಶರಾದ ಶ್ರೀಮತಿ  ಶಾರದ ನಿಂಗಪ್ಪ ಕೊಪ್ಪದ್ ರವರು  ಆರೋಪಿಗೆ  5 ಸಾವಿರ ದಂಡ ವಿಧಿಸಿ  ಶಿಕ್ಷೆ ಪ್ರಕಟಿಸಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಶ್ರೀ ಕಿರಣ್ ಕುಮಾರ್ ಜಿ ಕೆ ರವರು ವಾದ ಮಂಡಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close