ಶಿವಮೊಗ್ಗ ತಾಲೂಕಿನಲ್ಲಿ ಮುಂದುವರೆದ ಕಾಡಾನೆಗಳ ಹಾವಳಿ-ರೈತರಿಂದ ಆತ್ಮಹತ್ಯೆಯ ಎಚ್ಚರಿಕೆ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಆಯನೂರು ಹೋಬಳಿಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ಡಿಎಫ್ ಒ ಕಚೇರಿ ಎದುರು ಪುರುದಾಳಿನ ರೈತರು ಮೂರು ದಿನಗಳ ಹಿಂದೆ ಡಿಎಫ್ ಒ ಕಚೇರಿ ಎದರು ಪ್ರತಿಭಟಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಈಗ ಗುಡ್ಡದ ಅರಕೆರೆ ರೈತರು ಪ್ರತಿಭಟನೆಯ ಎಚ್ಚರಿಕೆ ನೀಡಿದರೆ ಸಿರಿಗೆರೆ ರೈತರು ಆತ್ಮಹತ್ಯೆಯ ದಾರಿ ಹಿಡಿಯುವುದಾಗಿ ಎಚ್ಚರಿಸಿದ್ದಾರೆ.

ಕಾಡಾನೆಗಳ ಹಾವಳಿಯಿಂದ ಆಯನೂರು ಹೋಬಳಿ‌ ಸಿರಿಗೆರೆ, ಪುರುದಾಳು, ಆಲದೇವರ ಹೊಸೂರು ಸರ್ವೆ ನಂಬರ್ 27/117,  ಗುಡ್ಡದ ಅರಕೆರೆಯ ಅಡಿಕೆ ಮತ್ತು ಬಾಖೆಗಿಡಗಳನ್ನ ಹಾಳು ಮಾಡಿದ್ದು, ರೈತರು ಗೋಳಾಡುವಂತೆ ಮಾಡಿದೆ. ಗುಡ್ಡದ ಅರಕೆರೆಯಲ್ಲಿ 1200 ಬಾಳೆಗಿಡ, 200 ಅಡಿಕೆ ಗಿಡಗಳನ್ನ ಹಾಳು ಮಾಡಿರುವುದಾಗಿ ರೈತರು ಆರೋಪಿಸಿದ್ದಾರೆ. 


ಈಗ ಮೂರು ನಾಕು ದಿನಗಳ ಹಿಂದಷ್ಟೇ ನಾಲ್ಕೈದು ಆನೆಗಳು ಸಿರಿಗೆರೆಯಲ್ಲಿ ಮುಸುಕಿನ ಜೋಳ, ಭತ್ತದ ಗದ್ದೆಗಳಿಗೆ ನುಗ್ಗಿ ಫಸಲು ತುಳಿದು ತಿಂದು ಅಪಾರ ನಷ್ವವನ್ನುಂಟು ಮಾಡಿತ್ತು. ರೈತರು ಜೀವ ಬಿಗಿಹಿಡಿದು ಕೊಂಡು ನಡುರಾತ್ರಿಯಲ್ಲಿ ತಮ್ಮ ಹೊಲಗಳಲ್ಲಿ ಕಾವಲು‌ ಕಾಯುವಂತಾಗಿದೆ. 


ಈ ಆನೆಗಳು ರಾತ್ರಿ ವೇಳೆ ದಾಳಿ ನಡೆಸುತ್ತಿವೆ. ಗುಡ್ಡದ ಹರಕೆರೆಯಲ್ಲಿ ಮೊನ್ನೆ ರಾತ್ರಿ 11 ಗಂಟೆಯಿಂದ  ಬೆಳಗಿನ ಜಾವ 6 ಗಂಟೆಯ ವರೆಗೆ 6 ಆನೆಗಳು ರೈತರ ತೋಟಗಳಿಗೆ  ದಾಳಿ ನಡೆಸಿ ಬೆಳೆ ಹಾನಿ ಉಂಟು ಮಾಡಿದರೆ ಆಲದಹೊಸೂರಿನಲ್ಲಿ ಬೆಳಗಿನ ಜಾವ ದಾಳಿ ಇಟ್ಟು ಬೆಳೆ ಹಾನಿಪಡಿಸಿದೆ ಎಂದು ರೈತರು ದೂರಿದ್ದಾರೆ. 

ಆನೆಗಳು ರೈತರ ಜೀವಕ್ಕೆ ಹಾನಿ ಮಾಡಿದರೆ ಯಾರು ಗತಿ?ಅವರ ಸಂಕಷ್ಟವನ್ನ. ಅರಣ್ಯ ಇಲಾಖೆ ತುರ್ತಾಗಿ ಪರಿಹರಿಸಬೇಕು. ಇಲ್ಲದಿದ್ದರೆ ಆತ್ಮಹತ್ಯೆ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ರೈತರು ಮೊರೆಯಿಟ್ಟಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close