ಸುದ್ದಿಲೈವ್/ಶಿವಮೊಗ್ಗ
ಇಂದು ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಅತಿಥಿ ಗೃಹದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಅಂಬಾಜಿ ಪಿ ಮೇಟಿ ಅವರ ಅಧ್ಯಕ್ಷತೆಯಲ್ಲಿ MRW ಶ್ರೀ ಭರತ ಕುಮಾರ ಅವರನ್ನು ಸಂಘದ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷರನ್ನಾಗಿ ಹಾಗೂ ಸೋರಬ ತಾಲೂಕಿನ VRWಕು. ಲತಾ ಅವರನ್ನು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
2023 ರಲ್ಲೇ ಜಿಲ್ಲಾಧ್ಯಕ್ಷರನ್ನಾಗಿ ಯಶೋಧಾ ಅವರಿಗೆ ಚುನಾವಣೆ ಮೂಲಕ ಆಯ್ಕೆ ಮಾಡಿರುವ ಕಾರಣ ಆ ಸ್ಥಾನ ಹೊರತು ಪಡಿಸಿ ಇನ್ನುಳಿದ ಸ್ಥಾನಗಳಿಗೆ ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಚಾಲಕರಾಗಿ H.ಸುರೇಶನಾಯ್ಕ ಜಿಲ್ಲಾ ಉಪಾಧ್ಯಕ್ಷರಾಗಿ ತೀರ್ಥಹಳ್ಳಿ ತಾಲೂಕಿನ ಲಕ್ಮಣ, ಶಿವಮೊಗ್ಗ ತಾಲೂಕಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನಾಸೀರ್,
ಜಿಲ್ಲಾ ಕಾರ್ಯದರ್ಶಿಯಾಗಿ ಸೋರಭ ತಾಲೂಕಿನ ಈಶ್ವರ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಗಂಗಾಧರ, ಜಿಲ್ಲಾ ಖಜಾಂಚಿಯಾಗಿ ಹೊಸನಗರ ತಾಲೂಕಿನ ಶ್ರೀಕಾಂತ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ವತಿಯಿಂದ ಅಭಿನಂದನೆಗಳನ್ನ ಸಲ್ಲಿಸಲಾಗಿದೆ.
ಯಾವುದೇ ರೀತಿಯಿಂದ ಕಾರ್ಯಕರ್ತರಿಗೆ ಶೋಷಣೆ ದಬ್ಬಾಳಿಕೆ ಮಾಡಬಾರದು. ಸಂಘದ ಹೆಸರಲ್ಲಿ ಹಣ ವಸೂಲಿ ಮಾಡೋದಾಗಲಿ ಅಥವಾ ಇನ್ಯಾವುದೇ ರೀತಿಯಿಂದ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಹಾಗೊಂದು ವೇಳೆ ಕಂಡುಬಂದಲಿ ನಿರ್ದಾಕ್ಷಿಣ್ಯವಾಗಿ ಉಚ್ಛಾಟನೆ ಮಾಡಲಾಗುವುದು ಎಂದು ಆಯ್ಕೆಯಾದ ಎಲ್ಲಾ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿಲಾಗಿದೆ.
ರಾಜ್ಯ ಗೌರವ ಅಧ್ಯಕ್ಷ ದತ್ತಾತ್ರೇಯ ಕುಡಕಿ, ರಾಜ್ಯ ಉಪಾಧ್ಯಕ್ಷರ ಕೆ.ಬಿ ಹರೀಶ್, ರಾಜ್ಯ ಕಾರ್ಯದರ್ಶಿ ಕೆ.ಎಸ್ ಚಂದ್ರಯ್ಯ, ರಾಜ್ಯ ಸಂಚಾಲಕ ಅನಿಲ ಅಭಿ, MRW ದಿನೇಶ್, ಜಿಲ್ಲಾಧ್ಯಕ್ಷೆ ಯಶೋಧಾ ಮೇಡಂ, ಭದ್ರಾವತಿ ರಮೇಶ್, ಸಿತ್ಯಾ ನಾಯಕ್, ಶಿಕಾರಿಪು ತಾಲೂಕ ಅಧ್ಯಕ್ಷರು, ಭದ್ರಾವತಿ ತಾಲೂಕ ಅಧ್ಯಕ್ಷರು, ಶಿವಮೊಗ್ಗ ತಾಲೂಕ ಅಧ್ಯಕ್ಷರು, ತೀರ್ಥಹಳ್ಳಿ ತಾಲೂಕ ಅಧ್ಯಕ್ಷರು, ಸೋರಭ ತಾಲೂಕ ಅಧ್ಯಕ್ಷರು ಹಾಗೂ ಇನ್ನಿತರ ಎಲ್ಲಾ ಕಾರ್ಯಕರ್ತರು, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.