ಸುದ್ದಿಲೈವ್/ಶಿವಮೊಗ್ಗ
ನವ್ಯಶ್ರೀ ಈಶ್ವರ ವನ ಚಾರಿಟಬಲ್ ಟ್ರಸ್ಟ್ ನವತಿಯಿಂದ ಅಬ್ಬಲಗೆರೆಯಲ್ಲಿ ಬೆಳೆಸಿರುವ ಮರಗಳನ್ನ ಮೆಸ್ಕಾಂ ನವರು ಕಡಿತಲೆ ಮಾಡಿರುವ ಬಗ್ಗೆ ಟ್ರಸ್ಟ್ ನ ಮಾಲೀಕ ನಾಗೇಶ್ ಆಕ್ಷೇಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎರಡು ಎಕರೆಯ ಈಶ್ವರ ವನದಲ್ಲಿ 1000 ಮರಗಳಿವೆ. 150ಕ್ಕೂ ಹೆಚ್ಚು ವಿವಿಧ ಗಿಡಗಳನ್ನ ಬೆಳೆಸಲಾಗಿದೆ. ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಜಾಗೃತಿ ನೀಡಲಾಗಿದೆ. ನ.11 ರಂದು ಮೆಸ್ಕಾಂ ಯಾವುದೇ ನೋಟೀಸ್ ನೀಡದೆ ವನದ 30 ಕ್ಕೂ ಹೆಚ್ಚು ಗಿಡಗಳನ್ನ ಕಡಿತಲೆ ಮಾಡಿದ್ದಾರೆ ಎಂದು ದೂರಿದರು.
ಯಾವುದೇ ಲಾಭ ನಷ್ಟದ ಉದ್ದೇಶವಿಲ್ಲದೆ ಈಶ್ವರ ವನ ಬೆಳೆಸಿದ್ದೇವೆ. ಖಂಡನೀಯ ಕೃತ್ಯವಾಗಿದೆ. ಮೆಸ್ಕಾಂ ನವರಿಗೆ ಗಮನಕ್ಕೆ ತರಲಾಗಿದೆ. ವನಗಳಿಗೆ ಅತಿಕ್ರಮಣ ಪ್ರವೇಶ ಮಾಡಿ ಕಟಾವ್ ಮಾಡಿದ್ದಾರೆ. ಪೊಲೀಸರಿಗೂ ದೂರು ನೀಡಿದ್ದಾರೆ. ಮೆಸ್ಕ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಬೇಕು.
ಕಟಾವ್ ಆದ ಐದಾರು ವರ್ಷದ ಗಿಡಗಳಾಗಿದ್ದು ಇದಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ. ನಮ್ಮ ಅರಣ್ಯ ಹೊರಗಡೆ ಈ ಗಿಡಗಳನ್ನ ನೆಡಲಾಗಿದೆ ಆದರೂ ಮರಗಳನ್ನ ಟ್ರಿಮ್ ಮಾಡುವ ಬದಲು ಬುಡದ ವರೆಗೆ ಕಟ್ ಮಾಡಿರುವುದು ದುರಂತ ಎಂದರು.