ಕೆಎಫ್ ಡಿ ನಿರ್ಮೂಲನೆ ನಮ್ಮ ಗುರಿ-ದಿನೇಶ್ ಗುಂಡೂರಾವ್

 


ಸುದ್ದಿಲೈವ್/ಶಿವಮೊಗ್ಗ


ಜನಾಭಿಪ್ರಾಯ ಮತ್ತು ಕ್ರಮಕ್ಕೆ ಅರಳಗೋಡಿಗೆ ಭೇಟಿ ನೀಡಲಾಗಿದೆ, ಸಂಚಾರಿ ಘಟಕ ಮತ್ತು ಮೂಲಭೂತ ಸೌಕರ್ಯವನ್ನ ಒಂದುವರೆ ತಿಂಗಳಲ್ಲಿ  ಒದಗಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 

ಅರಳಗೋಡಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಲ್ಯಾಬ್ ಬಗ್ಗೆ ಕ್ರಮ ಜುಗಿಸಲಾಗುವುದು. ಕೆಎಫ್ ಡಿಯಿಂದ ಸಾವಾಗಬಾರದು. ವ್ಯಾಕ್ಸಿನ್ಬ್ ಇಂಡಿಯನ್ ಕೌನ್ಸಲ್ ಫಾರ್ ಮೆಡಿಕಲ್ ಸರ್ಚ್ ನಿಂದ ಅನುಮತಿ ಪಡೆಯಲಾಗಿದೆ. ಹಳೆಯ ಮೆಡಿಸಿನ್ ಉಪಯೋಗವಿಲ್ಲವಾಗಿದೆ. . ವ್ಯಾಕ್ಸಿನ್ ಹೈದ್ರಾಬಾದ್ ನ ಸಂಸ್ಥೆಯಿಂದ ಮಾಡಲಾಗುವುದು‌ 2026 ಕ್ಕೆ ಅದು ಜನರ ಕೈಗೆ ಸಿಗಲಿದೆ ಎಂದರು.


2019 ರಲ್ಲಿ ಕೆಎಫ್ ಡಿ ಯಿಂದ ಸತ್ತವರಿಗೆ ಪರಿಹಾರದ ಬಗ್ಗೆ ಏನಾಗಿದೆ ಎಂಬುದನ್ನ ವಿಚಾರಿಸುವೆ. ಒಂದು ಕಾಯಿಲೆಯಿಂದ ಸಾವನ್ನಪ್ಪಿದರೆ ಪರಿಹಾರ ಕೊಡಲಾಗದು. ಕಾಯಿಲೆಯ ಉಚಿತವಾಗಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು. ಪಾಸಿಟಿವ್ ಮತ್ತು ನೆಗೆಟಿವ್ ವರದಿ ಬರಲು ತಡವಾಗುತ್ತಿದೆ. ಲ್ಯಾಬ್ ಸ್ಥಾಪನೆ ಕುರಿತು ಉನ್ನತ ಮಟ್ಟದಲ್ಲಿ ಆಗಬೇಕು. ತ್ವರಿತಗತಿಯಲ್ಲಿ ಚರ್ಚೆ ಮಾಡುವೆ ಎಂದರು.


ಶಿವಮೊಗ್ಗದಲ್ಲಿ ವಿಡಿಎಲ್ ಇದೆ. ದೃಢೀಕರಣಕ್ಕೆ ಪುಣೆಗೆ ಹೋಗಬೇಕಿದೆ. ವೈಜ್ಞಾನಿಕವಾಗಿ ಲ್ಯಾಬ್ ಆಗಬೇಕಿದೆ. ಪ್ರತಿಷ್ಠೆಗೆ ಅವಕಾಶವಿಲ್ಲ ಎಂದ ಸಚಿವರು ಕೋವಿಡ್ ಅಕ್ರಮ ಬಗ್ಗೆ ಎಸ್ಐಟಿ ರಚಿಸಲಾಗಿದೆ. ವ್ಯವಸ್ಥಿತರಿತಯಲ್ಲಿ ತನಿಖೆಯಾಗಬೇಕು‌ ಜಸ್ಟಿಸ್ ಕುನ್ಹಾ ಸಮಗ್ರ ತನಿಖೆ ನಡೆಸಿ ವರದಿ ಕೊಟ್ಟಿದ್ದಾರೆ. ಕ್ರಮ ಆಗಲಿದೆ ಎಂದರು.‌


ಜೆಡಿಎಸ್ ಶಾಸಕರನ್ನ ಕರೆದುಕೊಂಡು ಬರುವ ಬಗ್ಗೆ ಗೊತ್ತಿಲ್ಲ ಜನ ಬಿಜೆಪಿ ಆರೋಪಕ್ಕೆ ಉತ್ತರ ಕೊಟ್ಟಿದ್ದಾರೆ. ಜನ ಹೆಚ್ಚು ಜನಪರ ಕೆಲಸ ಮಾಡಲು ನಮಗೆ  ಸೂಚಿಸಿದ್ದಾರೆ. ಬಿಜೆಪಿ ವಕ್ಫ್ ಮೂಡಾ ವಾಲ್ಮೀಕಿ ಹಗರಣವೆಂದು ಬಿಂಬಿಸಲಾಯಿತು.  ಬಿಜೆಪಿ ನತ್ತು ಜೆಡಿಎಸ್ ನಲ್ಲಿ ಒಡಕಿದೆ ಎರಡೂ ಪಕ್ಷದಿಂದ ಎಷ್ಟು ಜನ ಬರ್ತರೆ ಗೊತ್ತಿಲ್ಲ. ಬರುವವರು ಸಿದ್ದಾಂತ ಒಪ್ಪಿಕೊಂಡು ಬರಲಿ. ಒಳ್ಳೆಯವರೆಂದರೆ ಸಾಮಾಜಿಕ ಕಳಕಳಿ ಬಗ್ಗೆ ಬದ್ಧತೆ ಇರಬೇಕು‌ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close