ಮುಸುಕುಧಾರಿಯಾಗಿ ಬಂದಿದ್ದವರಿಂದ ಕಪ್ಡ ರಾಜೇಶ್ ನ ಮರ್ಡರ್



ಸುದ್ದಿಲೈವ್/ಶಿವಮೊಗ್ಗ

ದ್ವಿಚಕ್ರ ವಾಹನ ರಿಪೇರಿಗೆ ಬಂದಿದ್ದ ರಾಜೇಶ್ ಶೆಟ ಯಾನೆ ಕಪ್ಡಾ ರಾಜೇಶ್ ನನ್ನ ಆಯುಶಗಳಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಬೊಮ್ಮನ್ ಕಟ್ಟೆಯ ಮುಖ್ಯ ರಸ್ತೆಯಲ್ಲಿ ನಡೆದಿದೆ. 

ಸ್ಥಳೀಯ ಮಾಹಿತಿ ಪ್ರಕಾರ, ನಗರದ ಬೊಮ್ಮನೆಯ ನಿವಾಸಿ ಕಪ್ಡ ರಾಜೇಶ್ ದ್ವಿಚಕ್ರವಾಹನ ರಿಪೇರಿಗೆ ಬಿಟ್ಟಿದ್ದ ವಾಹನವನ್ನ ತೆಗೆದುಕೊಂಡು ಹೋಗಲು ಬಂದ 6 ಜನ   ಮುಸುಕುಧಾರಿಯಾಗಿ ಬಂದು ಆಯುಧಗಳಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. 


ರಿಪೇರಿಗೆ ಬಿಟ್ಟಿದ್ದ ಸ್ಲೆಂಡರ್ ದ್ವಿಚಕ್ರವಾಹನವಾಹನವನ್ನ ತೆಗೆದುಕೊಂಡು ಹೋಗಲು ಬೊಮ್ಮನ್ ಕಟ್ಟೆಯ ಅರ್ಜುನ್ ಆಟೋ ವರ್ಕ್ಸ್ಗೆ ಬಿಟ್ಟಿದ್ದನ್ನ ತೆಗೆದುಕೊಂಡು ಹೋಗಲು ಬಂದಾಗ ದಾಳಿ ನಡೆದಿದೆ. ಮತ್ತೊಂದು ಮಾಹಿತಿ ಪ್ರಕಾರ ಗ್ಯಾರೇಜ್ ನಲ್ಲಿರುವನನ್ನ ಮಾತಾಡಿಸಿಕೊಂಡು ಹೋಗಲು ಬಂದಾಗ ಮರ್ಡರ್ ಆಗಿದೆ ಎನ್ನಲಾಗಿದೆ. 

ಬಸವನಗುಡಿ ರಾಘು ಶೆಟ್ಟಿ ಕೊಲೆಪ್ರಕರಣದಲ್ಲಿ ರಾಜೇಶ್  ಆರೋಪಿಯಾಗಿದ್ದ. ಬಿನೋಬ ನಗರ ಪೊಲೀಸರು, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್ ಸ್ಥಾಳಕ್ಕೆ ಧಾವಿಸಿದ್ದಾರೆ. ಸ್ಥಳದಲ್ಲಿ ಆತನ ಗಾಗಲ್ ಬಿದ್ದಿದ್ದು ರಾಜೇಶ್ ರಕ್ತ ಕಾರಿಕೊಂಡು ಸತ್ತಿದ್ದಾನೆ. ನಾಲ್ಕು ತಿಂಗಳ ಹಿಂದೆ ಕರಿ ವಿನಿಯನ ಹಾಫ್ ಮರ್ಡರ್ ಪ್ರಕರಣದಲ್ಲಿ ಆರೋಪಿಯಾಗಿದ್ದ. 

ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಕೊಲೆ ವೈಯುಕ್ತಿಕ ಕಾರಣದಿಂದ ಕೊಲೆ ಮಾಡಲಾಗಿದೆ. ಆರೋಪಿಗಳ ಪತ್ತೆಗೆ 3 ತಂಡ ರಚಿಸುವುದಾಗಿ ತಿಳಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close