ಮುಂಬೈ ಟು ಇರಾನ್ ಗೆ ಪಾರ್ಸಲ್ ಹೋಗುತ್ತಿದೆ ಎಂದು ನಂಬಿಸಿ ಶಿವಮೊಗ್ಗದ ಯುವತಿಗೆ ವಂಚನೆ


ಸುದ್ದಿಲೈವ್/ಶಿವಮೊಗ್ಗ

ಮುಂಬೈನಿಂದ ಇರಾನ್ ಗೆ ನಿಮ್ಮ ಪಾರ್ಸೆಲ್ ಹೋಗ್ತಾ ಇದೆ. ನಾವು ಮುಂಬೈ ಸೈಬರ್ ಪೊಲೀಸರು ಎಂದು ಯಾಮಾರಿಸಿ ಯುವತಿಯ ಅಕೌಂಟ್ ನಿಂದ 4 ಲಕ್ಷ ರೂ ವಂಚಿಸಿರುವ ಘಟನೆಯೊಂದು ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 

ನ.04 ರಂದು ಸಂಜೆ 5-30 ಗಂಟೆಯಿಂದ ಸಂಜೆ 6-00 ಗಂಟೆಯ ಸಮಯದಲ್ಲಿ ಅಪರಿಚಿತರೊಬ್ಬರು ಶಿವಮೊಗ್ಗದ ಯುವತಿಯೊಬ್ಬರಿಗೆ ಕರೆ ಮಾಡಿ ಫೇಡೆಕ್ಸ್ ಎಂಪ್ಲಾಯಿಯವನು ಎಂದು ಪರಿಚಯಿಸಿಕೊಂಡು ನಿಮ್ಮ ಹೆಸರಿನಿಂದ ಮುಂಬೈಯಿಂದ ಇರಾನ್ ಗೆ ಪಾರ್ಸೆಲ್ ಹೋಗುತ್ತಿದೆ ಎಂದು ಹೇಳಿದ್ದಾನೆ.  ನಿಮ್ಮ ಕರೆಯನ್ನು ಮುಂಬೈ ಸೈಬರ್ ಪೊಲೀಸ್ ಗೆ ಕನೆಕ್ಟ್ ಮಾಡುವುದಾಗಿ ಹೇಳಿ, ಕನೆಕ್ಟ್ ಮಾಡಿಕೊಟ್ಟಿದ್ದು,  ನಂತರ ಪೊಲೀಸ್ ನವರು ಮಾತನಾಡುತ್ತಿರುವುದಾಗಿ ಹೇಳಿದ ವ್ಯಕ್ತಿಯೊಬ್ಬ ನಿಮ್ಮ ಪಾರ್ಸೆಲ್ ನಲ್ಲಿ ಒಂದು ಲ್ಯಾಪ್ ಟಾಪ್, 05 ಕ್ರೇಡಿಟ್ ಕಾರ್ಡ ಹಾಗೂ 420 ಗ್ರಾಂ ಎಂ.ಡಿ.ಎಂ.ಎ ಇರುವುದಾಗಿ ತಿಳಿಸಿದ್ದಾನೆ. 

ನಂತರ ನಿಮ್ಮ ಸ್ಟೇಟ್ವೆಂಟ್ ತೆಗೆದುಕೊಳ್ಳಬೇಕು ಕೇಸ್ ಮಾಡಲು ನೀವು ಆಪ್ ನ್ನು ಇನ್‌ಸ್ಟಾಲ್ ಮಾಡುವಂತೆ ತಿಳಿಸಿದ್ದಾನೆ. ಅದರಂತೆ ಯುವತಿ Skype ಅಪ್ ನ್ನು ಇನ್ ಸ್ಟಾಲ್ ಮಾಡಿ ಅವರು ಹೇಳಿದಂತೆ MH0066OFFICIAL CYBER DEPARTMENT ಸರ್ಚ ಮಾಡಿ ಕನೆಕ್ಟ್ ಮಾಡಿಕೊಂಡಿದ್ದಾರೆ. 

ಮುಂಬೈ ಪೊಲೀಸ್ ಎಂದು ಹೇಳಿಕೊಂಡಿದ್ದ ವ್ಯಕ್ತಿ ಯುವತಿಗೆ ನಿಮ್ಮ‌ಮೊಬೈಲ್ ನಂಬರ್ ನ ಲಾಸ್ಟ್  ಡಿಜಿಟ್ ನಂಬರ್ 0413 ಮತ್ತು ಫೀಮೇಲ್ ಅಂತ ಹೇಳಿದ್ದರಿಂದ ಹೌದು ನನ್ನದೆ ಎಂದು ಯುವತಿ ತಿಳಿಸಿದ್ದಾಳೆ. ನಿಮ್ಮ ನಂಬರ್ ನ ಲಾಸ್ಟ ನಂಬರ್ ಬೇರೆ ಕಡೆ ಮಿಸ್ ಯೂಸ್ ಆಗಿದೆ. ಇದನ್ನು ಲೀಕ್ ಮಾಡಿದವರು ICICI bank employe ಎಂದು ಹೇಳಿದ್ದಾನೆ. ಪಿ,ಸಿ,ಸಿ ಕೊಟ್ಟರೇ ನಿಮ್ಮ ಹಾಗೂ ಬ್ಯಾಂಕ್ ಮಾಹಿತಿ ತೆಗಿತೀವಿ ಎಂದು ಹೇಳಿ ಬ್ಯಾಂಕ್ ಬ್ಯಾಲೆನ್ಸ ಚೆಕ್ ಮಾಡಿಸಿ ಬೇರೆ ಯಾವುದಾದರೂ ಲಿಂಕ್ ಇದಿಯಾ ಎಂದು ಹೇಳಿ ಹಣ ವಾಪಾಸು ಬರುವಂತೆ ಮಾಡುತ್ತೇವೆ ಎಂದು ಹೇಳಿ ICICI ಮೊಬೈಲ್ ಅಪ್ಲಿಕೇಷನ್ ಯಿಂದ Instant loan ಮಾಡಲು ಹೇಳಿ 3.80.000/-ರೂಗಳನ್ನು ಲೋನ್ ಪಡೆಯಲು  AVAIL ಬಟನ್ ನ್ನ ಯುವತಿ ಒತ್ತುತ್ತಿದ್ದಂತೆ ಯುವತಿಗೆ IMPS ಮೂಲಕ 3,75,281.00/-ರೂ ಕ್ರೇಡಿಟ್ ಆಗಿದೆ. ತಕ್ಷಣ ತಲಾ 2 ಲಕ್ಷ ರೂಗಳನ್ನು ವರ್ಗಾಯಿಸುವಂತೆ ಹೇಳಿದ ವ್ಯಕ್ತಿ ವಾಪಾಸ್ 15 ನಿಮಿಷದಲ್ಲಿ ಮರುಪಾವತಿಸುವುದಾಗಿ ಹೇಳಿದ ವ್ಯಕ್ತಿಗೆ IMPS ಮೂಲಕ 4 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. 

ತನಗೆ ಫೋನ್ ಕರೆ ಮಾಡಿ ಅಪರಿಚಿತರು ಹಣ ಮರುಪಾವತಿ ಮಾಡುತ್ತೇವೆಂದು ಹೇಳಿ ಹಣವನ್ನು ವಾಪಾಸ್ಸು ಕಳುಹಿಸದೇ ಇರುವುದರಿಂದ ಅನುಮಾನ ಬಂದಿದ್ದು ನಂತರ ಯುವತಿ ಸೈಬರ್ ಕ್ರೈಂ ಪೋರ್ಟಲ್ ನಲ್ಲಿ, ದೂರು ದಾಖಲಿಸಿದ್ದರು.  ಹಣವನ್ನು ಮರುಪಾವತಿ ಮಾಡಿಕೊಡುತ್ತೇವೆಂದು ನಂಬಿಸಿ, ಅವರಿಂದ ಒಟ್ಟು 04 ಲಕ್ಷ ರೂಗಳನ್ನು ಆನ್ ಲೈನ್ ಮೂಲಕ ಹಣವನ್ನ ವಂಚಿಸಿದ ವ್ಯಕ್ತಿಯನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close