ಭದ್ರಾವತಿ ಹಿಂದೂ ಗರಡಿಮನೆ ವಕ್ಫ್ ಆಸ್ತಿನಾ?

 


ಸುದ್ದಿಲೈವ್/ಶಿವಮೊಗ್ಗ

ಶತಮಾನಗಳ ಇತಿಹಾಸವಿರುವ ಭದ್ರಾವತಿ ಹಿಂದೂ ಕೋಟೆ ಗರಡಿಮನೆ ಹಿಂದೂ ಕೋಟೆ ಗರಡಿಮನೆಯಾಗಿಯನ್ನ ವಕ್ಫ ಕಬಳಿಸುತ್ತಿದೆ ಎಂಬ ಆತಂಕ ವಾಗಿದ್ದು ಈ ಸಂಬಂಧ   ಭದ್ರಾವತಿಯ ಹಿಂದೂಕೋಟೆ ಗರಡಿಮನೆ ಸಂಘಟನೆ ಡಿಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಮನವಿಯನ್ನ ಸಲ್ಲಿಸಿದೆ.

ಭದ್ರಾವತಿ ಕೋಟೆ ಏರಿಯದ ಬಸವಣ್ಣ ದೇವರ ಬೀದಿಯಲ್ಲಿರುವ ಹಿಂದುಕೋಟೆ ಗರಡಿಮನೆ, ಶತಮಾನಗಳ ಇತಿಹಾಸವಿರುವ ಭದ್ರಾವತಿಯ ಹೆಮ್ಮೆಯ ಕುರುಹು, ಒಂದು ಪಾರಂಪರಿಕ ತಾಣವಾಗಿದೆ.

ಶತಮಾನಗಳಿಂದ ಹಿಂದು ಕೋಟೆ ಗರಡಿ ಮನೆ ಜಾತಿ ಪಂಥ ಮತ ಭೇದವಿಲ್ಲದೆ ಎಲ್ಲರಿಗು ದೈಹಿಕ ಕಸರತ್ತಿಗೆ ಅವಕಾಶ ನೀಡಿ ಸದೃಢರನ್ನಾಗಿ ಮಾಡುವುದರ ಮೂಲಕ ಭದ್ರಾವತಿಯ ಹೆಸರನ್ನು ರಾಜ್ಯ ರಾಷ್ಟ್ರಮಟ್ಟದಲ್ಲಿ ಪರಿಚಯಿಸಿರುವ ಜೀವಂತ ಕಟ್ಟಡ - ಭದ್ರಾವತಿ ಭಾವನೆಗಳ ಸಂಕೇತ ಈ ಹಿಂದೂ ಕೋಟೆ ಗರಡಿಮನೆಯಾಗಿದೆ.

ಪ್ರತಿ ವರ್ಷ ಇಲ್ಲಿ ದಸರಾ ಆಚರಿಸಲಾಗಿತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಗರಡಿಮನೆ ಅವನತಿಗೆ ಹೊಂದುತ್ತಿದ್ದು ಇದನ್ನ ಹಿಂದೂ ಕೋಟೆ ಗರಡಿಮನೆ ಸ್ವತ್ತಿನಲ್ಲಿ ಅಕ್ರಮವಾಗಿ ಕಟ್ಟಿರುವ  ಹಜರತ್ ಹೈದರ್ ಮಸ್ತಾನ್ ದರ್ಗಾ ಕಬಗಜಾ ಮಾಡುತ್ತಿರುವಾತಂಕ ವ್ಯಕ್ತಪಡಿಸಿದೆ.

1982-83 ರ ಖಾತಾ ಎಸ್ಟ್ರಾಕ್ಟ್ ನಲ್ಲಿ ಸ್ವತಃ ನಗರಸಭಾ ಅಧಿಕಾರಿಗಳೇ ಉಲ್ಲೇಖಿಸಿದ್ದರು, ಇದುವರೆವಿಗೂ ಆ ಅಕ್ರಮ ಕಟ್ಟಡ ತೆರವುಗೊಳಿಸುವ ಯಾವುದೇ ಪ್ರಯತ್ನ ಮಾಡಿರುವುದಿಲ್ಲ. ಹಾಗೆಯೆ ಶಾಂತಿ ಸ್ವಾಹಾರ್ದತೆಯ ಕಾರಣದಿಂದ ಹಿಂದುಕೋಟೆ ಗರಡಿಮನೆಯ ಪದಾಧಿಕಾರಿಗಳಾಗಲಿ ಅಥವಾ ಆ ಭಾಗದ ಹಿಂದುಗಳಾಗಲಿ ಯಾವುದೇ ಒತ್ತಾಯದ ಕ್ರಮಕ್ಕೆ ಮುಂದಾಗದೆ ಶಾಂತಿಯನ್ನು ಕಾಪಾಡಿಕೊಂಡು ಬಂದಿರುವುದನ್ನೇ ದೌರ್ಬಲ್ಯವೆಂದು ಭಾವಿಸಿರುವ ಕೆಲವು ಮತಾಂಧರು, ಇಡಿ ಹಿಂದೂ ಕೋಟೆ ಗರಡಿಮನೆಯನ್ನೇ ವಕ್ಫ್ ಆಸ್ತಿಯನ್ನಾಗಿ ಕಬಳಿಸಲು ಹೊರಟಿರುವುದು ಕೇವಲ ಭದ್ರಾವತಿ ಜನತೆಯ ದೌರ್ಭಗ್ಯ ಮಾತ್ರವಲ್ಲ, ಯಾವುದೇ ಜಾತಿ ಮತ ಪಂಥ ಭೇದವಿಲ್ಲದೆ, ಸಾಮರಸ್ಯದಿಂದ, ಶತಮಾನಗಳಿಂದ ಸೇವೆಸಲ್ಲಿಸುತ್ತಿರುವ ಪುಣ್ಯ ಭೂಮಿಯಲ್ಲಿ ಕೋಮು ವಿಷಬೀಜ ಬಿತ್ತುವ ದುಷ್ಟ ಕೃತ್ಯವಾಗಿರುತ್ತದೆ.

ಹಾಗಾಗಿ ತಕ್ಷಣ ಈ ಅಕ್ರಮ ಕಟ್ಟಡವಾಗಿರುವ ಹಜರತ್ ಹೈದರ್ ಮಸ್ತಾನ್ ದರ್ಗಾ ತೆರವುಗೊಳಿಸಿ, ಹಿಂದುಕೋಟೆ ಗರಡಿಮನೆಯನ್ನು ಸುಸಜ್ಜಿತ ಗರಡಿಮನೆಯನ್ನಾಗಿ ನವೀಕರಣಗೊಳಿಸಿಕೊಳ್ಳಲು ಎಲ್ಲ ಸಹಾಯ ಸಹಕಾರ ನೀಡಬೇಕೆಂದು ಆಗ್ರಹಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close