ಸುದ್ದಿಲೈವ್/ಶಿವಮೊಗ್ಗ
ಮುಸ್ಲೀಂರು ಮಾಡುತ್ತಿರುವ ಅನ್ಯಾಯದ ಬಗ್ಗೆ ಕಾಂಗ್ರೆಸ್ ಮೌನವಾಗಿರುವುದು ಅಚ್ಚರಿ ತಂದಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಭೂಮಿ, ಮಠ ಮತ್ತು ದೇವಸ್ಥಾನದ ಜಾಗ, ಐತಿಹಾಸಿಕ ಸ್ಥಳ, ಸರ್ಕಾರಿ ಭೂಮಿ ವಿಶ್ವೇಶ್ವರಯ್ಯ ನವರು ಹುಟ್ಟಿದ ಜಾಗವೂ ವಕ್ಫ್ ಆಗಿದೆ. ಒಬ್ಬ ಕಾಂಗ್ರೆಸಿಗನೂ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.
ವಕ್ಫ್ ಜಾಗವೆಂದು ಬಂದ ನೋಟೀಸ್ ನೀಡಲಾಗಿರುವುದನ್ನ ವಾಪಾಸ್ ಪಡೆಯುವುದಾಗಿ ಹೇಳಿ ಸುಮ್ಮನಾಗಿರುವ ಕಾಂಗ್ರೆಸ್ ಇಸ್ಲಾಮೀಕರಣಕ್ಕೆ ಸರ್ಕಾರದ ಮೂಲಕ ಬೆಂಬಲ ನೀಡುತ್ತಿದೆ ಎಂದರು.
ಅಂಬೇಡ್ಕರ್ ಅವರು ಇಸ್ಲಾಂ ಸೇರಲು ತಯಾರು ಮಾಡಿಕೊಂಡಿದ್ದರು ಎಂದು ಮಾಜಿ ಸಚಿವ ಖಾದ್ರಿ ಅವರು ಹೇಳುತ್ತಾರೆ. ಒಬ್ಬ ಕಾಂಗ್ರೆಸಿಗನೂ ಈ ಹೇಳಿಕೆಯನ್ನ ತಿರಸ್ಕರಿಸಿಲ್ಲ. ಮುಸ್ಲೀಂರಿಗೆ 4% ಮೀಸಲಾತಿ ಬಗ್ಗೆ ಮತ ಕೇಳಿಬರುತ್ತಿದೆ ಸಿಎಂ ಆರ್ಥಿಕ ಇಲಾಖೆಗೆ ಮರುರಿಶೀಲಿಸಲು ಪತ್ರ ಬರೆದಿರುವುದು ಹಿಂದೂಸ್ತಾನವನ್ನ ಪಾಕಿಸ್ತಾನ್ ಎಂದು ಬರೆಯಲು ಹೊರಟಿದ್ದಾರೆ ಎಂದು ದೂರಿದರು.
ಇದು ಮುಂದು ವರೆದರೆ ಧರ್ಮಾಭಿಮಾನ, ಸಾಧುಸಂತರ ನೇತೃತ್ವದಲ್ಲಿ ಹಿಂದೂ ಸಮಾಜ ದಂಗೆ ಏಳಲಿದೆ. ರಸ್ತೆ ರಸ್ತೆಯಲ್ಲಿ ಕಾಂಗ್ರೆಸಿಗರನ್ನ ಕೊಲ್ಲುವ ಪರಿಸ್ಥಿತಿ ಬರುತ್ತದೆ. ಬಾಂಗ್ಲಾ ದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿದೆ. ಪಾಕ್ ನಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಿದೆ. ಅದೇ ರೀತಿ ಭಾರತದಲ್ಲಿ ಹಿಂದೂಗಳನ್ನ ತಳ್ಳುವ ಪ್ರಯತ್ನ ನಡೆಯುತ್ತಿದೆ. ಭಾರತವನ್ನ ಮುಸ್ಲೀಂ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಗುಡುಗಿದರು.
ಹಿಂದೂಗಳನ್ನ ಅಪಮಾನ ಮಾಡಲಾಗುತ್ತದೆ. ಹಿಂದೂ ಸಮಾಜ ಜಾಗೃತಿ ಆದರೆ ಯಾರನ್ನ ಎಲ್ಲಿ ಕೊಲ್ತಾರೋ ಗೊತ್ತಾಗೊಲ್ಲ. ಅಂತದ್ದರಲ್ಲಿ ರಾಜ್ಯದಲ್ಲಿ ದಂಗೆ ಎದ್ದರೆ ಕಾಂಗ್ರೆಸ್ ನೇರ ಹೊಣೆಯಾಗಲಿದೆ ಎಂದರು. ಈಗಿನ ಸಚಿವ ಸಂಪುಟದಲ್ಲಿರುವ ಭ್ರಷ್ಠಾಚಾರದ ಬಗ್ಗೆ ಎಣಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮತ್ತೆ ನಾಗೇಂದ್ರರನ್ನ ಕರೆತಂದು ಸಚಿವರನ್ನಾಗಿ ಮಾಡುವುದರಲ್ಲಿ ಅಚ್ಚರಿಯೇನಿಲ್ಲ ಎಂದರು.