ಸುದ್ದಿಲೈವ್/ಶಿವಮೊಗ್ಗ
ಬಿಜೆಪಿ ಅವಧಿಯ ಅಧಿಕಾರಿಗಳು ಜಿಲ್ಲೆಯಲ್ಲಿ ಮುಂದುವರೆದಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಕೂಗು ಎಲ್ಲೆಡೆ ಕೇಳಿ ಬರುತ್ತಿರುವ ಬೆನ್ನಲ್ಲೇ ಬಸವರಾಜ್ ಬೊಮ್ಮಾಯಿ ಸರ್ಕಾರದ ಪೋಸ್ಟರ್ ವೊಂದು ಸಚಿವ ದಿನೇಶ್ ಗುಂಡೂರಾವ್ ಅವರ ಭೇಟಿ ವೇಳೆ ಕಂಡುಬಂದಿದೆ.
ಸಾಗರ ತಾಲೂಕು ಅರಳಗೋಡಿಗೆ ಇಂದು ಸಂಜೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದರು. ಕೆಎಫ್ ಡಿ ಕಾಯಿಲೆ ಕುರಿತು ಸಭೆ ನಡೆಸಿದ್ದರು. ಆದರೆ ಅರಳಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರದ ದ್ವಾರ ಬಾಗಿಲಿನಲ್ಲೇ ಬಸವರಾಜ್ ಬೊಮ್ಮಾಯಿ ಕಾಲದ ಕ್ಯಾಸನೂರು ಕಾಡಿನ ಕಾಯಿಲೆ ಕುರಿತು ಜಾಗೃತಿ ಪೋಸ್ಟರ್ ರಾರಾಜಿಸಿದೆ.
ಸರ್ಕಾರ ಯಾವುದಿದೆ. ಯಾರು ಭೇಟಿ ನೀಡುತ್ತಿದ್ದಾರೆ ಎಂಬುದರ ಬಗ್ಗೆ ಅರಿವಿಲ್ಲದೆ ಅಧಿಕಾರಿಗಳಿಂದ ಈ ಯಡವಟ್ಟು ಮುಂದುವರೆದಿದೆ. ಈ ಆಸ್ಪತ್ರೆಗೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಭೇಟಿ ನೀಡುತ್ತಿದ್ದಾರೆ ಎಂಬುದು ಈ ಪೋಸ್ಟರ್ ಗಳಿಂದ ತಿಳಿದು ಬರುತ್ತಿದೆ.
ಇಂದು ಸಂಜೆ ಕೆಎಫ್ ಡಿ ಸಭೆಯಲ್ಲಿ ಅತಳಗೋಡು ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸುವುದಾಗಿ ಸಚಿವರು ತಿಳಿಸಿದ್ದಾರೆ. ಆದರೆ ಅಧಿಕಾರಿಗಳೆ ಅಪ್ ಗ್ರೇಡ್ ಆಗಿಲ್ಲ ಎಂಬುದು ಈ ಪೋಸ್ಟರ್ ನಿಂದ ತಿಳಿದು ಬಂದಿದೆ. ಸಿದ್ದರಾಮಯ್ಯನವರ ಸರ್ಕಾರ ಬಂದು ಒಂದು ಮುಕ್ಕಾಲು ವರ್ಷ ಕಳೆದಿದೆ ಅಧಿಕಾರಿಗಳು ನಿದ್ರಾವ್ಯಸ್ಥೆಯಲ್ಲಿದ್ದಾರೆ.