ಕೆಲ ಲೋಪಗಳು ಸರಿಪಡಿಸಿಕೊಳ್ಳದಿದ್ದರೆ ಕಾಡಾನೆ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಬಿಟ್ಟರೆ ಬೇರೇನು ಆಗೊಲ್ಲ!

 


ಸುದ್ದಿಲೈವ್/ಶಿವಮೊಗ್ಗ

ಆಯನೂರಿನ ಬಳಿಯ ವೀರಗಾರನ ಬೈರನ ಕೊಪ್ಪದಲ್ಲಿ ಜೋಳದ ಹೊಲಕ್ಕೆ ತೋಡಿರುವ ಕಂದಕಕ್ಕೆ ಆನೆಯೊಂದು ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂದಿಸಿದಂತೆ ಇಂದು ಆನೆಯ ಮರಣೋತ್ತರ ಪರೀಕ್ಷೆ ನಡೆದಿದೆ.

ನಾಲ್ಕು ಜನ ಪಶುವೈದ್ಯಾಧಿಕಾರಿಗಳು  ಅರಣ್ಯ ವನ್ಯ ಜೀವಿ ವಿಭಾಗದ ಡಿಎಫ್ ಒ ಪ್ರಸನ್ನ ಕುಮಾರ್ ಪಟಗಾರ್ ಮತ್ತು ಲಯನ್ ಸಫಾರಿಯ ಡಿಎಫ್ ಒ ಅಮರಾಕ್ಷರ್, ತಹಶೀಲ್ದಾರ್ ಗಿರೀಶ್ ಮತ್ತು ಗ್ರಾಮಪಂಚಾಯಿತಿ ಸದಸ್ಯರ  ಉಪಸ್ಥಿತಿಯಲ್ಲಿ ಆನೆಯ ಪೋಸ್ಟ್ ಮಾರ್ಟಂ ನಡೆದಿದೆ.

ಆನೆ ಸತ್ತು ಮೂರು ದಿನಗಳ ನಂತರ  ಮರಣೋತ್ತರ ಪರೀಕ್ಷೆ ನಡೆದಿದ್ದು ಆನೆಯ ಮೃತದೇಹ ಬಾತಿಕೊಂಡು ದುರ್ವಾಸನೆ ಹೊಡೆಯಲು ಆರಂಭಿಸಿದೆ.  ಪ್ರಾಥಮಿಕ ಮಾಹಿತಿ ಆಧಾರದ ಮೇರೆಗೆ ಇಬ್ಬರನ್ನ ಬಂಧಿಸಲಾಗಿದೆ. ಹನುಮಂತ ನಾಯ್ಕ್ ಮತ್ತು ಓರ್ವನನ್ನ ಬಂಧನಕ್ಕೊಳಪಡಿಸಿ ಇಬ್ಬರಿಗೂ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ‌.

ಪ್ರಾಥಮಿಕ ವರದಿಯ ಮೇಲೆ ದಾಖಲಾದ ಎಫ್ಐಆರ್ ಆಧಾರದ ಮೇರೆಗೆ  ವಿದ್ಯುತ್ ಶಾಕ್ ನಿಂದ ಆನೆ ಸತ್ತಿರುವುದು ತಿಳಿದು ಬಂದಿದೆ. ಅದರ ಆಧಾರದ ಮೇರೆಗೆ ಜಮೀನಿನ ಮಾಲೀಕ ಸೇರಿದಂತೆ ಇಬ್ಬರನ್ನ ಅರಣ್ಯ ಇಲಾಖೆ ಬಂಧಿಸಿದೆ.  ಆನೆಮೃತದೇಹದ ಸ್ಯಾಂಪಲ್ಸ್ ನ್ನ ಸಂಗ್ರಹಿಸಲಾಗಿದೆ ಎಂದು ಡಿಎಫ್ ಒ ಪ್ರಸನ್ನ ಕುಮಾರ್ ಪಟಗಾರ್ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.

ಮೂರು ಆನೆಗಳು ಸತ್ತಿವೆ

ಒಂದು ವರ್ಷ ಎರಡು ತಿಂಗಳ ಅವಧಿಯಲ್ಲಿ ಇದು ಸೇರಿ ಮೂರು ಗಂಡು ಕಾಡಾನೆಗಳು ಸತ್ತಿ ಬಿದ್ದಿವೆ. ಕಳೆದ ಬಾರಿ ವೀರಗಾರನ ಬೈರನಕೊಪ್ಪ ಗ್ರಾಮದ ಚನ್ನೇನಹಳ್ಳಿಯಲ್ಲಿ ಎರಡು ಗಂಡಾನೆಗಳು ಸತ್ತಿವೆ. ಇದು ಸಹ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದರಿಂದ ಜಮೀನಿನ ಮಾಲೀಕರನ್ನ ಬಂಧಿಸಲಾಗಿತ್ತು.

ಈ ಬಾರಿಯೂ ಜಮೀನಿನ ಮಾಲೀಕರನ್ನೇ ಬಂಧಿಸಲಾಗಿದೆ. ಆದರೆ ಕಳೆದ ಬಾರಿಯ ಜಮೀನಿನ ಮಾಲೀಕರ ವಿರುದ್ಧ ಪ್ರಕರಣ ಜಾಳು ಜಾಳಾಗಿದ್ದರಿಂದ ಜೈಲಿನಲ್ಲಿರಬೇಕಾಗಿದ್ದ ವ್ಯಕ್ತಿ ಹೊರಗಡೆ ಆರಾಮಾಗಿ ಓಡಾಡಿಕೊಂಡಿದ್ದಾನೆ.  ಈಬಾರಿಯೂ ಎಫ್ಐಆರ್ ಮತ್ತು ಸಾಕ್ಷಿಗಳು ಹೇಗೆ ರೂಪಿಸಿಕೊಳ್ಳಲಾಗಿದೆಯೋ ಗೊತ್ತಿಲ್ಲ. ಈ ಬಾರಿಯಾದರೂ ಪ್ರಕರಣ ಗಟ್ಟಿಯಾಗಿ ಶಿಕ್ಷೆಯಾದರೆ ಆ ಭಾಗದ ಜನರಿಗೆ ಖಡಕ್ ಸಂದೇಶ ರವಾನೆಯಾಗಲಿದೆ. ಮುಗ್ಧಪ್ರಾಣಿಗಳಿಗೆ ಖಡಕ್ ಸಂದೇಶ ರವಾನೆಯಾಗಲಿದೆ. ಇಲ್ಲವಾದರೆ ಈ ಪ್ರಕರಣವೂ ಜಾಳು ಜಾಳಾಗಲಿದೆ.

ಗಸ್ತು ಸುಸ್ತು...

ಅರಣ್ಯ ಇಲಾಖೆಯ ಗಸ್ತಿನಲ್ಲೇ ಲೋಪ ಎದ್ದು ತೋರುತ್ತಿದೆ. ಅಧಿಕಾರಿಗಳು ಮನೆಯಿಂದ ಅರಣ್ಯಕ್ಕೆ ಹೋಗುವುದೇ ಗಸ್ತು ಎಂದು ತೋರಿಸಿರುವುದರಿಂದ ಗಸ್ತು ನೆಗೆದುಬಿದ್ದು ಹೋಗಿರುವ ಆರೋಪಗಳು ಕೇಳಿ ಬಂದಿದೆ. ಎರಡು ದಿನಗಳ ನಂತರ ಆನೆಯ ಸಾವೊಂದು ತಿಳಿಯುತ್ತೆ ಎಂದರೆ ಗಸ್ತಿನಲ್ಲಿ ಲೋಪವಲ್ಲದೆ ಮತ್ತಿನ್ನೇನು? ಎಂಬ ಪ್ರಶ್ನೆ ಮೂಡಲಾರಂಭಿಸಿದೆ.

ಆನೆ ಹಾವಳಿ ಹೆಚ್ಚಾದ ಪರಿಣಾಮ ಅರಣ್ಯ ಇಲಾಖೆ ಡ್ರೈವ್ ಕಾರ್ಯಾಚರಣೆಗೆ ಇಳಿದಿತ್ತು. ಈ ಡ್ರೈವ್ ಸಹ ಆನೆಗಳನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಿರುಗಾಡುವಂತೆ ಮಾಡಿದೆ. ಡ್ರೈವ್ ಗಿಂತ ಆನೆ ಹಿಡಿಯಲು ಮುಂದಾಗಿದ್ದರೆ ಈ ಆನೆಗಳು ಸೇಫ್ ಆಗುವ ಸಾಧ್ಯತೆಯೂ ಇತ್ತು ಎಂಬುದು ರೈತರ ಅಂಬೋಣ. ಇವೆಲ್ಲಾ ಸಾಧ್ಯವಾ ಎಂಬುದು ಅರಣ್ಯ ಇಲಾಖೆ ತಿಳಿಸಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close