ಸುದ್ದಿಲೈವ್/ಶಿವಮೊಗ್ಗ
ರಸ್ತೆ ಬಿದ್ದ ಗುಂಡಿ ಮುಚ್ಚೋಕೆ, ಮೋರಿ ಕಟ್ಟಿಸಲು ಸರ್ಕಾರದ ಬಳಿ ಹಣ ಇಲ್ವಾ ಎಂಬ ಅನುಮಾನಕ್ಕೆ ಶಾಸಕ ಆರಗ ಜ್ಞಾನೇಂದ್ರರ ಈ ಹೇಳಿಕೆ ಅನುಮನ ಹುಟ್ಟಸಿದೆ. ಈ ಬಾರಿ ಸರಕಾರ ಶಾಸಕರಿಗೆ ಅನುದಾನ ಕೊಲಡ್ತಿಲ್ವಾ ಎಂಬ ಶಂಕೆ ಮೂಡಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಳಿದ್ರೆ ರಾಜ್ಯದಲ್ಲಿ ಎಲ್ಲರಿಗೂ ಎರಡು ಸಾವಿರ ಕೊಡ್ತಿದ್ದೀವಲ್ಲ. ನಿಮ್ಮನ್ನು ಯಾರು ರಸ್ತೆ ಮಾಡ್ಸಿ, ಚರಂಡಿ ಮಾಡ್ಸಿ ಅಂತಾ ಕೇಳಲ್ಲ ಹೋಗಿ ಅಂತಾರೆ. ಅಯ್ಯೋ ಈ ಬಾರಿ ಯಾಕದ್ರೂ ಗೆದ್ದಿದ್ದಿನೋ ಅನಿಸಿಬಿಟ್ಟಿದೆ ಎಂದು ಶಾಸಕ ಜ್ಞಾನೇಂದ್ರ ಮತದಾರರ ಬಳಿ ಅಳಲು ತೋಡಿಕೊಂಡಿದ್ದಾರೆ.
ಈ ಬಾರಿ ಗೆಲ್ಲದೆ ಇದ್ದಿದ್ದರೆ ಒಳ್ಳೆಯದಿತ್ತು ಅಂತ ಹಲವು ಬಾರಿ ಅನಿಸಿದೆ. ಸಾರ್ವಜನಿಕರ ಎದುರು ಅನುದಾನ ಕೊರತೆ ಬಗ್ಗೆ ಆರಗ ಜ್ಞಾನೇಂದ್ರ ಅಸಮಾಧಾನ ಹೊರಹಾಕಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ರಸ್ತೆ ದುರಸ್ಥಿಗೆ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ಬುಕ್ಲಾಪುರ - ಹೊರಬೈಲು ರಸ್ತೆ ದುರಸ್ಥಿಪಡಿಸುವಂತೆ ಪ್ರತಿಭಟನೆ ನಡೆಸಲಾಗಿದೆ. ಅದೇ ಮಾರ್ಗವಾಗಿ ಬಂದ ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನಾಕಾರರ ಮನವೊಲಿಸುವ ವೇಳೆ ಅನುದಾನ ಕೊರತೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.