ಸಂಚಲನ ಮೂಡಿಸಿದ ಸಚಿವ ಭೈರತಿ ಸುರೇಶ್, ಅಧಿಕಾರಿ ಸಸ್ಪೆಂಡ್


ಸುದ್ದಿಲೈವ್/ಶಿವಮೊಗ್ಗ

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಮಿಂಚಿನ ಸಂಚಲನದ ಹಿನ್ನಲೆಯಲ್ಲಿ ಜಿಡ್ಡುಗಟ್ಟಿದ ಮಹಾನಗರ ಪಾಲಿಕೆಯಲ್ಲಿ ಸಂಚಲನ ಮೂಡಿಸಿದೆ. ಸಚಿವರ ದಿಡೀರ್ ಭೇಟಿ ಹಿನ್ಬಲೆಯಲ್ಲಿ ನಿರೀಕ್ಷಕರೊಬ್ಬರು ಅಮಾನತುಗೊಂಡಿದ್ದಾರೆ

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಶಿವಮೊಗ್ಗ ಮಹಾನಗರ ಪಾಲಿಕೆಗೆ ದಿಢೀರ್‌ ಭೇಟಿ  ನೀಡಿ ಪಾಲಿಕೆ ನೌಕರರಿಗೆ ಶಾಕ್ ನೀಡಿದ್ದಾರೆ. ಈ ಸಂದರ್ಭ ಕರ್ತವ್ಯ ಲೋಪದ ಆರೋಪದ ಅಡಿ ಆರೋಗ್ಯ ನಿರೀಕ್ಷಕ ವೇಣುಗೋಪಾಲ್ ರನ್ನ  ಸಸ್ಪೆಂಡ್‌ ಮಾಡುವಂತೆ ಕಮಿಷನರ್‌ಗೆ ಸೂಚನೆ ನೀಡಿದರು. 

ಸಾರ್ವಜನಿಕರಿಗೆ ಸ್ಪಂದಿಸದೆ ಇದ್ದರೆ ಮತ್ತಷ್ಟು ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದರು. ನಂತರ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿದರು. ಮಹಾನಗರ ಪಾಲಿಕೆ ಆವರಣದಲ್ಲಿ ಪರಿಶೀಲನೆ ನಡೆಸಿದ ಸಚಿವ ಭೈರತಿ ಸುರೇಶ್‌, ನೇರವಾಗಿ ಸಹಾಯವಾಣಿ ಕೇಂದ್ರಕ್ಕೆ ತೆರಳಿದರು. ರಿಜಿಸ್ಟರ್‌ನಿಂದ ಈ ಹಿಂದೆ ದೂರು ನೀಡಿದ್ದ ಸಾರ್ವಜನಿಕರೊಬ್ಬರ ನಂಬರ್‌ ಹುಡುಕಿ ಕರೆ ಮಾಡಿದರು. ಸಮಸ್ಯೆ ಪರಿಹಾರವಾಗಿದೆಯೇ ಎಂದು ಪ್ರಶ್ನಿಸಿದರು. ಚರಂಡಿ ಕಟ್ಟಿಕೊಂಡು 20 ದಿನವಾಗಿದೆ. ದೂರು ನೀಡಿದರು ಕ್ರಮ ಕೈಗೊಂಡಿಲ್ಲ ಎಂದು ಅವರು ಅಲವತ್ತುಕೊಂಡ ಹಿನ್ನಲೆಯಲ್ಲಿ ಸಚಿವರು ಗರಂ ಆದರು.  

ಸಿಟ್ಟಾದ ಸಚಿವ ಬೈರತಿ ಸುರೇಶ್‌, ಆ ಭಾಗದ ಆರೋಗ್ಯ ನಿರೀಕ್ಷಕ ವೇಣುಗೋಪಾಲ್‌ ಎಂಬುವವರನ್ನು ತಕ್ಷಣ ಸಸ್ಪೆಂಡ್‌ ಮಾಡುವಂತೆ ಕಮಿಷನರ್‌ ಕವಿತಾ ಯೋಗಪ್ಪನವರ್‌ ಅವರಿಗೆ ಸೂಚಿಸಿದರು. ಅಲ್ಲದೆ ಸಸ್ಪೆಂಡ್‌ ಮಾಡಿರುವ ಆದೇಶ ಪ್ರತಿಯನ್ನು ತಮಗೆ ವಾಟ್ಸಪ್‌ ಮಾಡುವಂತೆ ಆದೇಶಿಸಿದರು.

ಚರಂರಂಡಿ ಬ್ಲಾಕ್‌ ಆಗಿರುವ ಕುರಿತು 20 ದಿನದ ಹಿಂದೆ ದೂರು ನೀಡಿದ್ದರು ಪರಿಹರಿಸಿಲ್ಲ. ಹಾಗಾಗಿ ಆರೋಗ್ಯ ನಿರೀಕ್ಷಕ ವೇಣುಗೋಪಾಲ್‌ ಎಂಬುವವರನ್ನು ಸಸ್ಪೆಂಡ್‌ ಮಾಡಿದ್ದೇವೆ. ಕಮಿಷನರ್‌ ಸೇರಿದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದೆ ಇದ್ದರೆ ಸಸ್ಪೆಂಡ್‌ ಮಾಡುವುದೋ, ವರ್ಗಾವಣೆ ಮಾಡುವುದೋ ಅಥವಾ ಬೇರೆ ಕ್ರಮ ಕೈಗೊಳ್ಳಬೇಕೊ ಎಂಬುದನ್ನು ನಿರ್ಧರಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close