ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ನಗರ ಉಪವಿಭಾಗ-2ರ ವ್ಯಾಪ್ತಿಯ ಮಂಡ್ಲಿ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ನ.23 ರಂದು ಬೆಳಗ್ಗೆ 9.00 ರಿಂದ ಮ. 2.00 ವರೆಗೆ ಈ ಕೆಳಗಿನ ಬಡಾವಣೆಗಳಲ್ಲಿ ವ್ಯತ್ಯಯವಾಗಿದೆ.
ಸೀಗೆಹಟ್ಟಿ, ರವಿವರ್ಮ ಬೀದಿ, ಕೆಂಚರಾಯನ ಬೀದಿ, ಟಿ.ಎಸ್.ಆರ್.ರಸ್ತೆ, ಆಜಾದ್‌ನಗರ 1 ರಿಂದ 4 ನೇ ತಿರುವು, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಕುಂಬಾರ ಬೀದಿ, ನಾಗಭೂಷಣ ಪ್ರೆಟ್ರೋಲ್ ಬಂಕ್, ನ್ಯೂಮಂಡ್ಲಿ, ಮಂಡ್ಲಿ ಬೈಪಾಸ್, ಶಿವಶಂಕರ ರೈಸ್‌ಮಿಲ್, ಮುರಾದ್ ನಗರ, ಇಮಾಮ್ ಬಾಡ, ಜಿ.ಎಸ್.ಕೆ.ಎಂ.ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.