ಸೆಲೆಗಳನ್ನ ರಕ್ಷಿಸುವ ಕಾನೂನಿನ ಅಗತ್ಯವಿದೆ-ಅಭಿನವ ಶಂಕರ ಭಾರತಿ ಶ್ರೀಗಳು


ಸುದ್ದಿಲೈವ್/ಶಿವಮೊಗ್ಗ

ನಗರದ ಕೋರ್ಪಳಯ್ಯನ ಮಂಟದಲ್ಲಿ ನಿರ್ಮಲ ತುಂಗಭದ್ರ ಅಭಿಯಾನದ ಅಂಗವಾಗಿ ತುಂಗಾರತಿ ನಡೆದಿದೆ. ತುಂಗಾರತಿ ವೇಳೆ ಭರ್ಜರಿ ಜನ ಸೇರ್ಪಡೆಗೊಂಡಿದ್ದಾರೆ. 

ಮಂಟಪಕ್ಕೆ ವಿದ್ಯುತ್ ದೀಪದ ಅಲಂಕಾರ ಮಾಡಿ ಆಕರ್ಷಣೆಯನ್ನಾಗಿ ಮಾಡಲಾಗಿತ್ತು. ತುಂಗನದಿಗೆ ಜೀವಕಳೆ ತುಂಬುವ ಕಾರ್ಯ ನಡೆದಿದೆ.ನಿರ್ಮಲ ತುಂಗಭದ್ರಾ ಅಭಿಯಾನದ ಜನ ಜಾಗೃತಿ ಹಿನ್ನಲೆ

ನದಿ ಉಳಿವಿಗಾಗಿ ತುಂಗಾ ಆರತಿ ಕಾರ್ಯಕ್ರಮ ಆಯೋಜನೆ ನಡೆಸಲಾಗಿದೆ. ಪರ್ಯಾವರಣ ಟ್ರಸ್ಟ್ ಹಾಗೂ ನಿರ್ಮಲ ತುಂಗಭದ್ರಾ ಅಭಿಯಾನ ತಂಡದಿಂದ ತುಂಗಾ ಆರತಿ ನಡೆದಿದೆ. ತುಂಗಾ ಆರತಿಗೆ  ಕೂಡಲಿ ಶೃಂಗೇರಿ ಮಠದ ಅಭಿನವ ಶಂಕರ ಭಾರತಿ ಶ್ರೀಗಳು ಚಾಲನೆ ನೀಡಿದರು. 

ನಂತರ ಮತನಾಡಿದ ಅವರು, ಶಿವಮೊಗ್ಗದಲ್ಲಿ ತುಂಗಾ ಆರತಿಯಲ್ಲಿ ಕೂಡ್ಲಿ ಶೃಂಗೇರಿ ಮಠದ ಅಭಿನವ ಶಂಕರ ಭಾರತಿ ಆಶೀರ್ವಚನ ನಡೆಸಿದರು. ದೃಷ್ಟಿ, ಸಿದ್ಧಾಂತ ಮತ್ತು ಅನುಷ್ಠಾನ ಈ‌ ಹಂತಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು, ಸಂಸ್ಕಾರ, ಶಿಕ್ಷಣ ಸೇರಿದಂತೆ ಪಡೆಯುತ್ತಿದ್ದೇವೆ. ಆ ಋಣ ಕಳೆದುಕೊಳ್ಳುವುದಕ್ಕೆ ಮುಂದಾಗಬೇಕು ಎಂದರು. 

ಪಡೆದಿದ್ದಕ್ಕಿಂತ ಹೆಚ್ಚಿನದ್ದನ್ನು ಕೊಡಬೇಕು‌. ಪಂಚ ಮಹಾಯಜ್ಞಗಳ ಮೂಲಕ ಪಡೆದಿದ್ದನ್ನು ವಾಪಸ್ ನೀಡಿದರೆ ಋಣಮುಕ್ತರಾಗುತ್ತೇವೆ. ದಂಡ ನೀತಿ ದುರ್ಬಲವಾದಾಗ ಯಜ್ಞ ಪ್ರಕ್ರಿಯೆ ನಾಶವಾಗುತ್ತದೆ. ತುಂಗೆಯನ್ನು ನಿರ್ಮಲಗೊಳಿಸುವುದು ಮತ್ತು ಅದನ್ನು ಉಳಿಸುವ ಎರಡೂ ಕೆಲಸಗಳು ಆಗಬೇಕಿದೆ ಎಂದರು. 

ನದಿಗಳ ಉಗಮ ಸ್ಥಾನದಿಂದ ಎಲ್ಲ ಸೆಲೆಗಳನ್ನು ಉಳಿಸಬೇಕು. ಮುಂಚೆ ಮರಗಳ ಸಂಖ್ಯೆ ಅಧಿಕ ಇದ್ದವು ಧರೆಯಾಗಿ ನೀರು ನದಿಗೆ ಸೇರುತ್ತಿತ್ತು. ಮರಗಳನ್ನು ಕಡಿದು ವಿಪರೀತ ನೀರು ಹೀರುವ ಬೆಳೆಗಳನ್ನು ಬೆಳೆಸಲಾಗುತ್ತಿದೆ. ಇದರಿಂದ ಭೂಮಿಗೆ ನೀರನ್ನು ಹಿಡಿದಿಡುವ ಶಕ್ತಿಯೇ ಇಲ್ಲವಾಗಿದೆ. ಕೃಷಿ ಪದ್ಧತಿಯಲ್ಲಿ ಕೆಲವು ಬದಲಾವಣೆ ಗಳಾಗಬೇಕು. 

ಅದಕ್ಕೆ ಪೂರಕವಾದ ವ್ಯವಸ್ಥೆ ರೂಪಗೊಳ್ಳಬೇಕಿದೆ. ಬಳಸುವ ರಾಸಾಯನಿಕ ಸೇರಿದಂತೆ ಎಲ್ಲವುಗಳ ಬಗ್ಗೆ ಸರಕಾರ ಗಮನಹರಿಸಬೇಕು. ಸೆಲೆಗಳನ್ನು ರಕ್ಷಿಸುವ ಮರಗಳು ಬೇಕು, ಅದಕ್ಕೆ ಪೂರಕವಾದ ಕಾನೂನು ಅಗತ್ಯವಿದೆ.ನದಿಗಳ ರಕ್ಷಣೆ ಮಾಡುವುದೇ ನಮ್ಮ ಬಹುದೊಡ್ಡ ಜವಾಬ್ದಾರಿ ಆಗಬೇಕು ಎಂದರು. 

ನದಿಯನ್ನು ಪೂಜೆ ಮಾಡಿದರೆ ಸಾಲದು, ಪೂಜೆ ಸಲ್ಲಿಸಿದವರನ್ನು ಪೂಜಾರ್ಹರಾಗಿ ಉಳಿಸಿಕೊಳ್ಳಬೇಕು. ನದಿಗಳು ಮಲೀನಗೊಳ್ಳದಂತೆ ಗಮನಹರಿಸಬೇಕು ಎಂದು ಕರೆ ನೀಡಿದರು. 

ತುಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಚನ್ನಬಸಪ್ಪ, ಎಂಎಲ್ಸಿ ಡಾ. ಧನಂಜಯ ಸರ್ಜಿ, ಡಿಎಸ್ ಅರುಣ್ ಸೇರಿದಂತೆ ಹಲವಾರು ಜನ ಸಾರ್ವಜನಿಕರು ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close