ಶಿವಣ್ಣನಿಗೆ ಹೂಗುಚ್ಚದ ಸ್ವಾಗತ



ಸುದ್ದಿಲೈವ್/ಶಿವಮೊಗ್ಗ

ಭೈರತಿ ರಣಗಲ್ ಸಿನಿಮಾ‌ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಹಿನ್ನಲೆಯಲ್ಲಿ ನಟ ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಗೋಪಿ ವೃತ್ತದಲ್ಲಿ ಜ್ವಾಲಾಮುಖಿ ಕನ್ನಡ ಸೇವಾ ಸಂಘದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಆದರೆ ಶಿವಣ್ಣ ಕಾರ್ಯಕ್ರಮದಲ್ಲಿ ಅಪ್ಪು ಅಭಿಮಾನಿಗಳು ಅಪ್ಪು ಅಪ್ಪು ಎಂಬ ಘೋಷಣೆ ಕೂಗಿದ್ದು ಗಮನಸೆಳೆದಿತ್ತು.  ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಉದ್ಘಾಟನೆಯನ್ನ ನಟ ಶಿವರಾಜ್ ಕುಮಾರ್ ನೆರವೇರಿಸಿದರು. 

ನಂತರ ಮಲ್ಲಿಕಾರ್ಜುನ ಚಲನ ಚಿತ್ರ ಮಂದಿರದಲ್ಲಿ ಮಾಸ್ ಹಿಟ್ ಆದ ಭೈರತಿ ರಣಗಲ್ ಸಿನಿಮಾದ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪತ್ನಿ ಗೀತಾರೊಂದಿಗೆ ಚಲನಚಿತ್ರ ಮಂದಿರಕ್ಕೆ ಬಂದ ಶಿವಣ್ಣನಿಗೆ ಹೂವಿನ ಗುಚ್ಚ ಹಾಕಲಾಯಿತು. 

ಈ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್ ಗೀತಾ ಪ್ರೊಡಕ್ಷನ್ ನಲ್ಲಿ ತಯಾರಾದ ಎರಡನೇ ಸಿನಿಮಾ ಭೈರತಿ ರ,ಣಗಲ್ ಸಿನಿಮಾ. ಇದನ್ನ ಬೆಂಬಲಿಸಿದ ಸಮಸ್ತ ಕನ್ನಡಿಗರಿಗೆ ಧನ್ಯವಾದಗಳು ಎಂದರು. ಈ ವೇಳೆ  ಅಭಿಮಾನಿಗಳು ಶಿವಣ್ಣನ ಜೊತೆಯ ಸೆಲ್ಫಿಗಾಗಿ ಮುಗಿಬಿದ್ದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close