ಸುದ್ದಿಲೈವ್/ಭದ್ರಾವತಿ
ಭದ್ರಾವತಿ ರಸ್ತೆ ಉಬ್ರಾಣಿ-ಅಮೃತಾಪುರ ಏತ ನೀರಾವರಿಘಟಕದ ಪಂಪ್ ಹೌಸ್ ಹಿಂಭಾಗದಜಾಕ್ ವೆಲ್ ಗೇಟಿಗೆ ಸುಮಾರು 40 ರಿಂದ 45 ವರ್ಷ ವಯಸ್ಸಿನ ಅನಾಮಧೆಯ ಗಂಡಸಿನ ಮೃತದೇಹ ಪತ್ತೆಯಾಗಿದೆ.
ಶವ ಕೊಳೆತ ಸ್ಥಿತಿಯಲ್ಲಿ ದೊರಕಿದ್ದು, ಮೃತನ ಮೈಮೇಲೆ ಹೂವಿನ ಚಿತ್ರವಿರುವ ಅಂಗಿ, ಕೇಸರಿ ಬಣ್ಣದ ಪಂಚೆ ಇರುತ್ತೆ, ಮೃತ ವ್ಯಕ್ತಿಯು ಸುಮಾರು 5.5 ಅಡಿ ಎತ್ತರ ಇದ್ದು, ತಲೆಯಲ್ಲಿ ಸುಮಾರು 2 ಇಂಚು ಉದ್ದದಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು ಹೊಂದಿದ್ದು, ಮೃತನಕಣ್ಣು ನೀರಿನಲ್ಲಿ ಕೊಳೆತು ಹೊರ ಬಂದಿರುವರೀತಿ ಹಾಗೂ ಬಾಯಿಯಲ್ಲಿ ನಾಲಗೆ ಕೊಳೆತು ಹೊರಬಂದಿರುವರೀತಿ ಇದೆ, ಮೃತನ ಕೈ, ಕಾಲು, ಹೊಟ್ಟೆ, ಮುಖದಲ್ಲಿಚರ್ಮ ನೀರಿನಲ್ಲಿ ಕೂಳೆತ ಹಾಗೇ ಕಂಡುಬಂದಿದ್ದುಚರ್ಮ ಬಿಳಿಚಿಕೊಂಡಿರುತ್ತದೆ.
ಈ ವ್ಯಕ್ತಿಯ ವಾರಸ್ಸುದಾರರ ಇದ್ದಲ್ಲಿ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.