ಸುದ್ದಿಲೈವ್/ಸಾಗರ
ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯಲ್ಲಿ ಆಟೋ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಉಂಟಾಗಿದ್ದು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿ , ಇನ್ನೊಬ್ಬರು ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು , ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ತ್ಯಾಗರ್ತಿ ರಸ್ತೆಯ ರೈಲ್ವೆ ಗೇಟ್ ಬೊಮ್ಮತ್ತಿ ಹತ್ತಿರ ಆಟೋ ಮತ್ತು ಕಾರ್ ನಡುವೆ ಭೀಕರ ಅಪಘಾತ ನಡೆದಿದ್ದು ನಾಲ್ವರಿಗೆ ಗಾಯಗಳಾಗಿದ್ದು ಇಬ್ಬರು ಮೃತ ಪಟ್ಟಿರುವ ಘಟನೆ ನಡೆದಿದೆ.
ಆಟೋ ಚಾಲಕ ರಾಘವೇಂದ್ರ ಸ್ಥಳದಲ್ಲಿಯೇ ಸಾವನ್ನಪ್ಪಿದರೇ ಮಾಲತಿ (35) ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಮೃತಪಟ್ಟವರನ್ನು ಕಾರೆಹೊಂಡದ ಆಟೋ ಚಾಲಕ ರಾಘವೇಂದ್ರ ಎಂದು ತಿಳಿದು ಬಂದಿದೆ.
ಕಾರೆಹೊಂಡದ ಒಂದೇ ಕುಟುಂಬದ ಕೃತಿಕಾ (12)ರಾಮಪ್ಪ (40) ಸಾನ್ವಿಕ ( 8) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ಅಪಘಾತದಲ್ಲಿ ಮೃತಪಟ್ಟ ಆಟೋ ಚಾಲಕ ರಾಘವೇಂದ್ರ ಎಂಬುವವರ ಮೃತದೇಹವನ್ನು ಸಾಗರದ ಸರ್ಕಾರಿ ಉಪವಿಭಾಗಿಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.