ಎತ್ತಿನ ಗಾಡಿಗೆ ಶಾಲಾ ಬಸ್ ಡಿಕ್ಕಿ

ಸುದ್ದಿಲೈವ್/ಶಿವಮೊಗ್ಗ

ಶಾಲಾ ಸ್ಕೂಲ್ ಬಸ್ ವೊಂದು ಅಬ್ಬಲಗೆರೆಯ ಬಳಿ ಎತ್ತಿನಗಾಡಿಗೆ ಡಿಕ್ಕಿ ಹೊಡೆದಿದ್ದು, ಎತ್ತಿನ ಕಾಲು ಮುರಿದಿರುವ ಘಟನೆ ಇಂದು ಸಂಜೆ ನಡೆದಿದೆ. ಅಪಘಾತಪಡಿಸಿದ ಶಾಲಾ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ನವುಲೆ ಬಳಿ ಇರುವ ವಿದ್ಯಾಭಾರತಿ ಶಾಲಾ ವಾಹನ ಮಕ್ಕಳನ್ನ ಡ್ರಾಪ್ ಮಾಡಿ ವಾಪಾಸ್ ಖಾಲಿ ಬರುವಾಗ ಅಬ್ಬಲಗೆರೆಯಿಂದ ಒಂದು ಕಿಮಿ ಹಿಂದೆ ಎತ್ತಿನ ಗಾಡಿಗೆ ಹಿಂದಿನಿಂದ ಗುದ್ದಿದೆ.  

ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯಿಂದಾಗಿ ಎತ್ತಿನ ಕಾಲು ಮುರಿದಿದೆ. ಎತ್ತಿನ ಗಾಡಿ ಚಲಾಯಿಸುತ್ತಿದ್ದ ಪಮೇಶ್ವರ್ ನಾಯ್ಕ್ ಅವರಿಗೆ  ಮತ್ತು ಜಗದೀಶ್ ಎಂಬುವರಿಗೆ ಗಾಯಗಳಾಗಿದೆ.

ಖಾಲಿ ಬಸ್ ಬರುವಾಗ ಈ ಘಟನೆ ನಡೆದಿದೆ. ಅಪಘಾತ ಸ್ಥಳದಿಂದ ಶಾಲೆ ಡ್ರೈವರ್ ಪರಾರಿಯಾಗಿರುವುದಾಗಿ ಸ್ಥಳಿಯರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.

ಗಾಯಾಳುಗಳನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಎತ್ತಿನ ಬಂಡಿ ಮತ್ತು ಶಾಲಾ ವಾಹನವನ್ನ ಗ್ರಾಮಾಂತರ ಪೊಲೀಸ್ ಠಾಣೆಗೆ ತಂದಿರಿಸಲಾಗಿದೆ. ಎತ್ತಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close